ಬಂಟ್ವಾಳ: “ಆರ್ಥಿಕ ಸೇರ್ಪಡೆ” ಎನ್ನುವ ಪ್ರಸಕ್ತ ಸರಕಾರದ ನೀತಿಯು ದೇಶದ ಎಲ್ಲಾ ಆರ್ಥಿಕ ವರ್ಗದ ಜನರನ್ನು ಒಗ್ಗೂಡಿಸುವ ಅದ್ಭುತ ಕಲ್ಪನೆ. ದೇಶದ ಯಾವುದೇ ಪ್ರಜೆಯು ದೇಶದ ಆರ್ಥಿಕತೆಯಿಂದ ದೂರ ಉಳಿಯಕೂಡದು ಎಂಬುದು ಈ ಕಲ್ಪನೆಯ ಪ್ರಮುಖ ಉದ್ದೇಶ. ಆಧುನಿಕ ತಂತ್ರಜ್ಞಾನದ ಫಲವಾಗಿ ಆರ್ಥಿಕ ಸೇರ್ಪಡೆಗೆ ಜನಸಾಮಾನ್ಯರೂ ಭಾಗಿಯಾಗಲು ಬ್ಯಾಕಿಂಗ್ ವ್ಯವಸ್ಥೆ ಸಹಕಾರಿಯಾಗಿದೆ ಎಂದು ನಿಟ್ಟೆಯ ಕೆ ಎಸ್ ಹೆಗ್ಡೆ ಮ್ಯಾನೇಜ್‍ಮೆಂಟ್ ಕಾಲೇಜಿನ ಡಾ| ಸುಧೀರ್‍ರಾಜ್‍ರವರು ಅಭಿಪ್ರಾಯಪಟ್ಟರು.
Validcitory
ಅವರು ಬಂಟ್ವಾಳದ ಎಸ್. ವಿ.ಎಸ್ ಕಾಲೇಜಿನ ಅರ್ಥಶಾಸ್ತ್ರ, ಬಿ.ಕಾಂ ಮತ್ತು ಬಿ.ಬಿ.ಎಂ ವಿಭಾಗ ಮತ್ತು ಮಂ.ವಿ.ವಿ ಅರ್ಥಶಾಸ್ತ್ರ ಉಪನ್ಯಾಸಕರ ಸಂಘಗಳ ಜಂಟಿ ಆಶ್ರಯದಲ್ಲಿ ನಡೆದ “ಎಮರ್ಜಿಂಗ್ ಟ್ರೆಂಡ್ಸ್ ಇನ್ ಇಂಡಿಯನ್ ಬ್ಯಾಂಕಿಂಗ್ ಎಂಡ್ ಫೈನಾನ್ಸಿಯಲ್ ಇನ್‍ಕ್ಲೂಷನ್” ಎಂಬ ವಿಷಯದ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಆಧುನಿಕ ತಂತ್ರಜ್ಞಾನದ ಉದಯ ಮತ್ತು ಬ್ಯಾಂಕಿಂಗ್‍ನಲ್ಲಿ ಅದರ ಬಳಕೆ ಒಂದಕ್ಕೊಂದು ಪೂರಕವಾಗಿವೆ. ದೇಶದ ಸರಕಾರಿ ಮತ್ತು ಖಾಸಗಿ ಬ್ಯಾಂಕ್‍ಗಳು ಆರ್ಥಿಕ ಸೇರ್ಪಡೆಯನ್ನು ಸಾಕಾರಗೊಳಿಸುವುದಕ್ಕೆ ಸನ್ನದ್ಧವಾಗಿವೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಪಾಂಡುರಂಗ ನಾಯಕ್ ಮಾತನಾಡಿ ದೇಶದ ಕಾಲ ಕಾಲದ ಆರ್ಥಿಕ ನೀತಿಗಳು ಮತ್ತು ಅದಕ್ಕೆ ಪೂರಕವಾದ ಬ್ಯಾಕಿಂಗ್ ವ್ಯವಸ್ಥೆಯನ್ನು ತಿಳಿಯುವಲ್ಲಿ ಇಂತಹ ವಿಚಾರ ಸಂಕಿರಣಗಳು ಸಹಕಾರಿ. ಕಾಲೇಜಿನಲ್ಲಿ ನಡೆದ ಹಲವು ವಿಚಾರ ಸಂಕಿರಣಗಳು ಸಂಸ್ಥೆಯ ಪ್ರತಿಷ್ಟೆಗೆ ಸಾಕ್ಷಿ ಎಂದರು.
ಬಿ.ಕಾಂ. ವಿಭಾಗ ಮುಖ್ಯಸ್ಥೆ ಅಖಿಲಾ ಪೈ ಸ್ವಾಗತಿಸಿದರು. ಬಿ.ಬಿ.ಎಂ ವಿಭಾಗ ಮುಖ್ಯಸ್ಥೆ ಲಕ್ಷೀ ಭಟ್ ಅತಿಥಿ ಪರಿಚಯ ಮಾಡಿದರು. ವಿಚಾರ ಸಂಕಿರಣದ ಸಂಯೋಜಕಿ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ.ಪ್ರೇಮಲತಾ ಪೈ ವಂದಿಸಿದರು. ಉಪನ್ಯಾಸಕಿ ಶ್ರೀಮತಿ ದೀಪಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *