ಇತ್ತೀಚೆಗೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರಾದ ಅತ್ಯಂತ ಪ್ರತಿಭಾವಂತ ನಟ ಸೂರ್ಯರ ‘ಅಂಜಾನ್’ ಚಿತ್ರದ ಬಗ್ಗೆ ಸಾಕಷ್ಟು ಸುದ್ದಿ ಹರಡಿತ್ತು. ಆ ಚಿತ್ರದಲ್ಲಿ ನಿರ್ದೇಶಕ ಮುರುಗದಾಸ್ ವಿಶೇಷ ಹಾಡಿಗೆ ನಟಿಸಲೆಂದು ಬಾಲಿವುಡ್ ನಟಿ ಕರೀನ ಕಪೂರ್ ಅವರನ್ನು ಕರೆತರುತ್ತಾರೆ. ಈ ಮುಖಾಂತರ ಆಕೆ ತಮಿಳು ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿದ್ದಾರೆ. ಇದು ತುಂಬಾ ಜೋರಾಗಿ ಎಲ್ಲೆಡೆ ಹರಿದಾಡಿತು.
ಆದರೆ, ಅದರ ಬಗ್ಗೆ ಕರೀನ ಕಪೂರ್ ಖಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ತನಗೆ ಸೂರ್ಯ ಯಾರು ಅನ್ನುವುದೇ ಗೊತ್ತಿಲ್ಲ ಎಂದು ಹೇಳಿದ್ದಳು. ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಆಕೆಗೆ ಇರುವ ದೃಷ್ಟಿ ಕೋನ, ಸೂರ್ಯ ಅವರ ಬಗ್ಗೆ ಹೇಳಿದ ಪರಿ ಎಲ್ಲವೂ ಸೂರ್ಯಾಭಿಮಾನಿಗಳಿಗೆ ಸಿಟ್ಟು ತರಿಸಿದೆ. ಇದರಿಂದ ಕುಪಿತರಾದ ಕರೀನಾ ತನ್ನ ಮಾತಿಗೆ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದಾರೆ.
ಕರೀನಾ ನನಗೆ ಸೂರ್ಯ, ಲಿಂಗು ಸ್ವಾಮಿ ಯಾರೂ ಅಂತಾನೆ ಗೊತ್ತಿಲ್ಲ ಎನ್ನುವ ಮಾತನ್ನು ಹೇಳಿದ್ದಳು. ನನಗೆ ಹಾಲಿವುಡ್, ದಕ್ಷಿಣ ಭಾರತದ ಭಾಷೆಗಳಲ್ಲಿ ನಟಿಸುವ ಯಾವ ಆಸಕ್ತಿ ಇಲ್ಲ ಎಂದು ಸಂದರ್ಶನವೊಂದರಲ್ಲಿ ಆಕೆ ತಿಳಿಸಿದ್ದಳು. ತನ್ನ ಮಾತು ವಿವಾದಕ್ಕೆ ತಿರುಗುವುದನ್ನು ಗಮನಿಸಿದ ಕರೀನಾ ಕೂಡಲೇ ತನ್ನ ಮಾತನ್ನ ಬದಲಿಸಿ, ಸೂರ್ಯನ ಬಗ್ಗೆ ಯಾರಿಗೆ ತಿಳಿದಿಲ್ಲ. ಅವರೊಬ್ಬ ಪ್ರತಿಭಾವಂತ ನಟ. ನಾನು ಅವರನ್ನು ಮುಖತಃ ಭೇಟಿಯಾಗಿಲ್ಲ ಆದರೆ ಅವರ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇನೆ ಎಂದು ಹೇಳಿಕೆ ನೀಡುವ ಮೂಲಕ ಸೂರ್ಯ ಅಭಿಮಾನಿಗಳ ಕೆಂಗಣ್ಣಿನಿಂದ ಪಾರಾಗಿದ್ದಾಳೆ.

