ಬಂಟ್ವಾಳ: ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳ, ಲಯನ್ಸ್ ಸೇವಾ ಟ್ರಸ್ಟ್ (ರಿ.) ಬಂಟ್ವಾಳ ಇದರ ಆಶ್ರಯದಲ್ಲಿ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ನುರಿತ ವೈದ್ಯರ ತಂಡದವರಿಂದ ಆ.16 ಭಾನುವಾರ ಪೂರ್ವಾಹ್ನ ಘಂಟೆ 9.00ರಿಂದ 12.30ರ ವರೆಗೆ ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ, ಶೇರಾ – ಮಾಣಿ ಇಲ್ಲಿ ಉಚಿತ ಆರೋಗ್ಯ ಹಾಗೂ ಕಣ್ಣು ತಪಾಸಣಾ ಶಿಬಿರ ಜರಗಲಿರುವುದು. ಈ ಶಿಬಿರದಲ್ಲಿ ಸಾಮಾನ್ಯ ರೋಗ, ಎಲುಬು ಮತ್ತು ಗಂಟು ವಿಭಾಗ, ಕಣ್ಣಿನ ವಿಭಾಗ, ಕಿವಿ-ಮೂಗು-ಗಂಟಲು ವಿಭಾಗ, ಮಕ್ಕಳ ವಿಭಾಗ, ಸ್ತ್ರೀ ರೋಗ ವಿಭಾಗದ ತಜ್ಞ ವೈದ್ಯರು ಭಾಗವಹಿಸಲಿರುವರು ಎಂದು ಶಿಬಿರದ ಸಂಯೋಜಕರಾದ ಲಯನ್ ಗಂಗಾಧರ ಶೇರಾ ಬಿ. ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *