ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆ.22ರಂದು ಶನಿವಾರ ಸ್ಪರ್ಧೆಗಳನ್ನು ಎರ್ಪಡಿಸಲಾಗಿದೆ.
ಪ್ರಬಂಧ, ಚಿತ್ರಕಲಾ ಮತ್ತು ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ತಮ್ಮ ಹೆಸರನ್ನು ಆ.20 ರಂದು ನೊಂದಾಯಿಸತಕ್ಕದ್ದು.
images
ಸ್ಪರ್ಧೆ ಆ.22ರಂದು ಶನಿವಾರ ಆಶ್ರಮದಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ನಡೆಯಲಿರುವುದು. ಹಾಗೂ ಶ್ರೀ ಕೃಷ್ಣನಿಗೆ ತುಳಸಿಪತ್ರವನ್ನು ಅರ್ಪಿಸಲಿಚ್ಚಿಸುವವರು ತಮ್ಮ ಹೆಸರನ್ನು ಆಶ್ರಮದಲ್ಲಿ ಆ.29ರಂದು ಶನಿವಾರದ ಒಳಗೆ ತಿಳಿಸಬೇಕು. ಅಂತಹ ಭಕ್ತರು 1000 ತುಳಸೀದಳವನ್ನು ಆಶ್ರಮಕ್ಕೆ ಸೆ.5ರಂದು ತರಲು ಕೋರಲಾಗಿದೆ. ಆಶ್ರಮದಲ್ಲಿ ಪುಸ್ತಕ ಮಳಿಗೆಯಲ್ಲಿ ವಿಶೇಷ ಪುಸ್ತಕ ಪ್ರದರ್ಶನಮತ್ತು ಮಾರಟವನ್ನು ಎರ್ಪಡಿಸಲಾಗಿದೆ. ಎಂದು ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *