ಬಜ್ಪೆ: ಯುವತಿಯೋರ್ವಳಿಗೆ ಮದುವೆಯಾಗುವ ಭರವಸೆ ನೀಡಿ ಆಕೆಯ ಜೊತೆ ಅಕ್ರಮ ದೈಹಿಕ ಸಂಪರ್ಕ ಬೆಳೆಸಿಕೊಂಡು ಮಗು ಜನನಕ್ಕೆ ಕಾರಣನಾದ ಆರೋಪಿಯನ್ನು ಬುಧವಾರ ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಮೂಲ್ಕಿಯ ಪಕ್ಷಿಕೆರೆ ನಿವಾಸಿ ಅಜಿತ್ ಶೆಟ್ಟಿ ಬಂಧಿತ ಆರೋಪಿ.
ಆರೋಪಿ 2014ರ ಸೆಪ್ಟೆಂಬರ್ನಿಂದ ಯುವತಿ ಜೊತೆ ಅಕ್ರಮ ಸಂಬಂಧ ಬೆಳೆಸಿಕೊಂಡ ಫಲವಾಗಿ 2015ರ ಮೇಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಆತ ಮದುವೆಯಾಗಲು ಒಪ್ಪದ ಕಾರಣ ಆಕೆ ಬಜ್ಪೆ ಠಾಣೆಗೆ ದೂರು ನೀಡಿದ್ದಳು. ಈತನ ವಿರುದ್ಧ ಐಪಿಸಿ ಸೆಕ್ಷನ್ 376ರ ಪ್ರಕಾರ ಅತ್ಯಚಾರ ಹಾಗೂ ಸೆಕ್ಷನ್ 420ರ ಪ್ರಕಾರ ವಂಚನೆ ಪ್ರಕರಣ ದಾಖಲಾಗಿತ್ತು.
ಆದರೆ ಆ ಮಗು ತನ್ನದಲ್ಲ, ಆಕೆ ಜೊತೆ ದೈಹಿಕ ಸಂಬಂಧ ಹೊಂದಿಲ್ಲ ಎಂದು ಬಂಧನ ಭೀತಿಯಿಂದ ಅಜಿತ್ ತಲೆಮರೆಸಿಕೊಂಡಿದ್ದ. ಆದರೆ ನಿನ್ನೆ ಕಾಯರ್ಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
