ಬಜ್ಪೆ: ಮಹಿಳೆಯೋರ್ವರನ್ನು ಮನೆಗೆ ಬರದಂತೆ ತಡೆದು ವರದಕ್ಷಿಣೆ ಹಣಕ್ಕಾಗಿ ಪೀಡಿಸಿದ್ದಾರೆಂದು ಮಹಿಳೆಯೋರ್ವರು ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆ ದೂರಿನನ್ವಯ ಆಕೆಯ ಗಂಡ ಶಾಹಿದ್ ಹುಸೈನ್, ಆತನ ತಂದೆ ಡಿಲಾವರ್ ಹುಸೈನ್, ತಾಯಿ ಶಹನಾಜ್, ಗಂಡನ ತಮ್ಮ ಶೆಹರಾಜ್ ಹುಸೈನ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರದಾರ ಮಹಿಳೆ ಉಡುಪಿಯ ಕಿನ್ನಿಮುಲ್ಕಿ ನಿವಾಸಿ ಶಾಹಿದ್ ಹುಸೈನ್ ಎಂಬಾತನ ಜೊತೆ 26-08-2012 ರಂದು ಮುಸ್ಲಿಂ ಸಂಪ್ರದಾಯದ ಪ್ರಕಾರ ಮಂಗಳೂರಿನ ಟಿ.ಎಂ.ಎ. ಪೈ ಹಾಲ್ನಲ್ಲಿ ಮದುವೆಯಾಗಿದ್ದು, ಕೆಲಸದ ನಿಮಿತ್ತ ಇಬ್ಬರೂ ಮಸ್ಕತ್ಗೆ ತೆರಳಿದ್ದರು. ಆದರೆ ಜುಲೈ 21, 2015ರಂದು ಇಬ್ಬರೂ ಊರಿಗೆ ವಾಪಸ್ ಬಂದಿದ್ದು, ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಳಿದಿದ್ದರು.
ಈ ವೇಳೆ ಆರೋಪಿಗಳು ವಿಮಾನ ನಿಲ್ದಾಣದತ್ತ ಬಂದಿದ್ದು, ಆಗ ದೂರುದಾರ ಮಹಿಳೆಯ ಗಂಡ ಶಾಹಿದ್ ಹುಸೈನ್, `ನೀನು ನನ್ನ ಜೊತೆಯಲ್ಲಿ ಕಿನ್ನಿಮುಲ್ಕಿ ಮನೆಗೆ ಬರುವುದು ಬೇಡ, ನೀನು ನಿನ್ನ ತವರು ಮನೆಗೆ ಹೋಗು, ನನ್ನ ಜೊತೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ‘ ಎಂದು ಬೆದರಿಸಿ, ಅವಾಚ್ಯ ಶಬ್ದಗಳಿಂದ ಬೈದು, ಆಕೆಯ ಸಾಮಾಗ್ರಿಗಳನ್ನು ಬೇರೆ ಟ್ರಾಲಿಯಲ್ಲಿ ಹಾಕಿದ್ದಲ್ಲದೆ ನಿನ್ನ ಅಪ್ಪನ ಜೊತೆ ಹೋಗು ಎಂದು ಹೇಳಿದ್ದಾರೆ.
ಅಲ್ಲದೆ ಈ ಮುಂಚೆ ಗಂಡ ಮಸ್ಕತ್ನಲ್ಲಿದ್ದ ಸಂದರ್ಭ ತನ್ನ ತಂದೆ ಉಡುಗೊರೆಯಾಗಿ ನೀಡಿದ್ದ ನೀಡಿದ ಚಿನ್ನಾಭರಣಗಳು ಸಾಲದು, ಇನ್ನೂ ಹೆಚ್ಚಿನ ಚಿನ್ನಾಭರಣಗಳನ್ನು ತರಬೇಕೆಂದು ಕಿರುಕುಳ ನೀಡುತ್ತಿದ್ದುದ್ದಲ್ಲದೇ, ಮನೆಯ ಹೊರಗಿನಿಂದ ಬೀಗ ಹಾಕಿ ಹೋಗುತ್ತಿದ್ದರು. ತನ್ನ ಮದುವೆಯ ಸಮಯ ತಂದೆ ತಾಯಿ ಉಡುಗೊರೆಯಾಗಿ ನೀಡಿದ 120 ಪವನು ಚಿನ್ನಾಭರಣಗಳನ್ನು ಕಾಪು ಕಾಪರ್ೋರೇಷನ್ ಬ್ಯಾಂಕ್ನ ಲಾಕರ್ನಲ್ಲಿ ಇಡಲಾಗಿದೆ. ಅದರ ಬೀಗವು ನನ್ನ ಬಳಿ ಇದ್ದು, ಆ ಬೀಗವನ್ನು ನೀಡಬೇಕೆಂದು ಬೆದರಿಕೆ ಹಾಗೂ ಕಿರುಕುಳವನ್ನು ನೀಡುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

 

By Suddi9

Leave a Reply

Your email address will not be published. Required fields are marked *