ಬಂಟ್ವಾಳ : ನಮ್ಮ ಹಿರಿಯರು ಸುಮಾರು 80ವರ್ಷಗಳ ಹಿಂದೆ ಈಗಿನ ಹಾಗೆ ಸೌಲಭ್ಯಗಳಿಲ್ಲದಿದ್ದರೂ ಸಮಾಜಬಂಧುಗಳ ಹಿತಕ್ಕಾಗಿ ಒಂದೂರಿನಿಂದ ಇನ್ನೊಂದೂರಿಗೆ ನಡೆದುಕೊಂಡು ಹೋಗಿ ಒಟ್ಟು ಸೇರಿ ಇಂದಿನ ನಮ್ಮ ಪೀಳಿಗೆಗೆ ವಿದ್ಯಾಭ್ಯಾಸ ಹಾಗೂ ಇನ್ನಿತರ ವ್ಯವಸ್ಥೆಗಳನ್ನು ಮಾಡಿರುವುದು ನಾವು ಯಾವತ್ತೂ ಮರೆಯಬಾರದು ಎಂದು ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ನುಡಿದರು. ಅವರು ಬಂಟರ ಸಂಘ ಬಿ.ಸಿ.ರೋಡ್ ರಂಗೋಲಿಯಲ್ಲಿ ನಡೆದ ‘ಆಟಿಡೊಂಚಿ ಕೂಟ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
DSC_88C
ನಮ್ಮ ಪೂರ್ವಜರು ಗ್ರಾಮೀಣ ಹಾಗೂ ಕೃಷಿ ಕ್ಷೇತ್ರದಲ್ಲಿ ಅನುಸರಿಸುತ್ತಿದ್ದ ಪದ್ಧತಿಗಳು ಹಾಗೂ ಕಷ್ಟಭರಿತ ದುಡಿತ ಮಿತವಾದ ಖರ್ಚುವೆಚ್ಚಗಳಿಂದಾಗಿ ನಮ್ಮ ಭಾರತ ದೇ ಶ ಇಂದಿಗೂ ಸುಸ್ಥಿತಿಯಲ್ಲಿದೆ . ಆಧುನೀಕರಣದ ವೇಗದಲ್ಲಿ ಈ ಪೀಳಿಗೆಯ ಜನಾಂಗವು ಹಿಂದಿನದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮುನ್ನಡೆಯದಿದ್ದರೆ ಊಟಕ್ಕೂ ಕಷ್ಟಕರವಾದ ದಿನಗಳು ಬರುವುದು ನಿಶ್ಚಿತ ಎಂದು ಮುಖ್ಯ ಅಥಿತಿಯಾಗಿ ಭಾಗವಹಿಸಿದ ಡಾ.ನರೇಂದ್ರ ರೈ ದೇರ್ಲ ನುಡಿದರು.
ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನ್ಯಾಯವಾದಿ ಆಶಾಮಣಿ ರೈ , ಗೌರವಾಧ್ಯಕ್ಷ ನಾರಾಯಣ ಹೆಗಡೆ, ವಲಯ ಅಧ್ಯಕ್ಷ ಶಂಕರ್ ಶೆಟ್ಟಿ ಪರಾರಿಗುತ್ತು , ಉಪಾಧ್ಯಕ್ಷ ಜಯಂತ್ ಶೆಟ್ಟಿ ಅಜ್ಜಿಬೆಟ್ಟು , ಪ್ರೇಮಾ ಎಸ್.ಶೆಟ್ಟಿ ಬಂಟುಗುರಿ, ಕಾರ್ಯದರ್ಶಿ ಎಂ.ಸತೀಶ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ರಕ್ಷಿತ್ ಶೆಟ್ಟಿ , ಸಂಘಟನಾ ಕಾರ್ಯದರ್ಶಿ ಯಶವಂತ ಶೆಟ್ಟಿ ಅಜೆಕಲ, ಕೋಶಾಧಿಕಾರಿ ಮಾಧವ ಮಾರ್ಲ, ಜತೆ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಎವರ್iಡೆ, ಮಹಿಳಾ ಸಮಿತಿ ಅಧ್ಯಕ್ಷೆ ಗೀತಾ ಜಿ.ಶೆಟ್ಟಿ , ಉಪಾಧ್ಯಕ್ಷೆ ಶಶಿಕಲಾ ಶ್ರೀನಿವಾಸ ಶೆಟ್ಟಿ , ಭಾರತಿ.ಎಸ್.ಚೌಟ , ಕೋಶಾಧಿಕಾರಿ ರೇಶ್ಮಾ ಯತೀಶ್ ಭಂಡಾರಿ , ಜತೆ ಕಾರ್ಯದರ್ಶಿ ವಿನಯ ಶೆಟ್ಟಿ ಉಪಸ್ಥಿತರಿದ್ದರು. ಶೋಭಾ ವಿ ಹೆಗಡೆ ಸ್ವಾಗತಿಸಿದರು. ಚೈತ್ರಾ ರಂಜಿತ್ ಶೆಟ್ಟಿ ವಂದಿಸಿ ಆಶಾ ಪ್ರಸಾದ್ ರೈ , ಮಣಿಮಾಲಾ ಬಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *