ಬಂಟ್ವಾಳ: ಬಂಟ್ವಾಳ ತಾಲ್ಲೂಕಿನಲ್ಲಿ 1ರಿಂದ 10ನೇ ತರಗತಿ ಓದುತ್ತಿರುವ ಬೀಡಿ ಕಾರ್ಮಿಕರ ಮಕ್ಕಳಿಗೆ ಕಾರ್ಮಿಕ ಇಲಾಖೆಯು ವಿದ್ಯಾರ್ಥಿ ವೇತನಕ್ಕಾಗಿ ಜು.27ರಿಂದ ಅರ್ಜಿ ಆಹ್ವಾನಿಸಿದೆ.
ಅರ್ಹ ವಿದ್ಯಾರ್ಥಿಗಳು ನಿಗದಿತ ಅರ್ಜಿ ಫಾರಂ ಪಡೆದು ಬೀಡಿ ಕಂಪೆನಿ ಮುಖ್ಯಸ್ಥರಿಂದ ಸಹಿ ಮತ್ತು ಮೊಹರು ಹಾಕಿಸಿಕೊಂಡು ಬಳಿಕ ಆಧಾರ್‍ಕಾರ್ಡ್ ಮತ್ತು ಸ್ವತಃ ಬ್ಯಾಂಕ್ ಖಾತೆ ಪುಸ್ತಕ ಪ್ರತಿಯೊಂದಿಗೆ ದ್ವಿಪ್ರತಿಗಳಲ್ಲಿ ಶಾಲಾ ಮುಖ್ಯಸ್ಥರಿಗೆ ಕೂಡಲೇ ಸಲ್ಲಿಸಬೇಕು. 10 ನೇ ತರಗತಿ ಮೇಲ್ಟಟ್ಟ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಇವರಿಗೆ ಅರ್ಜಿ ಸಲ್ಲಿಸಲು ಸೆ. 15 ಕಡೇ ದಿನವಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 9449893440 ಅಥವಾ 9945992856ನ್ನು ಸಂಪರ್ಕಿಸಬಹುದು ಎಂದು ಸಿಐಟಿಯು ಕಾರ್ಯದರ್ಶಿ ರಾಮಣ್ಣ ವಿಟ್ಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *