ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ಸಮನ್ವಯ ಸಮಿತಿ ಅಂ. ಕೇಂದ್ರ, ಮೊಡಂಕಾಪು ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವು ಪುರಸಭಾ ಸದಸ್ಯ ಸದಾಶಿವ ಬಂಗೇರರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ನಿರೂಪಣಾಧಿಕಾರಿ ನಟರಾಜ್, ನಿವೃತ್ತ ಶಿಕ್ಷಕಿ ಮೆಟಿಲ್ಲಾ ಪಿಂಟೋ, ಮೊಡಂಕಾಪು ಇನ್ಪೆಂಟ್ ಜೀಸಸ್ ಕನ್ನಡ ಮಾಧ್ಯಮ ಶಾಲಾ ಶಿಕ್ಷಕ ಸುನಿಲ್ ಪ್ರಾನ್ಸಿಸ್, ಮೇಲ್ವಿಚಾರಕಿ ಗಾಯತ್ರಿ ಕಂಬಳಿ, ಅಂ. ಕಾರ್ಯಕರ್ತೆಯರಾದ ರಮಣಿ, ಶಶಿಕಲಾ ಮತ್ತುತರರು ಉಪಸ್ಥಿತರಿದ್ದರು.

