ಬಂಟ್ವಾಳ : ಸಮಸ್ತ ಕೇರಳ ಮತ ವಿದ್ಯಾಭ್ಯಾಸ ಬೋರ್ಡ್ ಚೇಲಾರಿ 2015ನೇ ಸಾಲಿನಲ್ಲಿ ನಡೆಸಿದ 5ನೇ ತರಗತಿ ಪಬ್ಲಿಕ್ ಪರಿಕ್ಷೆಯಲ್ಲಿ ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಅಧೀನದ ಕಲ್ಲಡ್ಕದ ಮುನೀರುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿ ಮುಹಮ್ಮದ್ ಫೈಝಲ್ ಇಬ್ರಾಹಿಂ ಮತ್ತು ಕೆ.ಸಿ.ರೋಡ್ ನೂರುಲ್ ಉಲೂಂ ಮದ್ರಸದ ವಿದ್ಯಾರ್ಥಿ ಅವರು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಹೊಂದಿದ್ದಾರೆ.
ಮುಹಮ್ಮದ್ ಫೈಝಲ್ ಇಬ್ರಾಹಿಂ ಅವರು ಮುಹಮ್ಮದ್ ಫಾರೂಕ್ ಹಾಗೂ ಖತೀಜಾ ಫರಾಹತ್ ದಂಪತಿಯ ಪುತ್ರ ಹಾಗೂ ಮುಹಮ್ಮದ್ ಅಜ್ಮಲ್ ಅವರು ಅಬ್ದುಲ್ ಲತೀಫ್ ಹಾಗೂ ರೈಹಾನ ದಂಪತಿಯ ಪುತ್ರ.
