ಬಂಟ್ವಾಳ: ಬಿಜೆಪಿ ಮುಖಂಡ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರಿಂದ ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿ ಪರಾಭವಗೊಂಡ ಅಭ್ಯರ್ಥಿಗಳ ಮನೆ ಭೇಟಿ ಕಾರ್ಯಕ್ರಮ ಶುಕ್ರವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವೀರಕಂಭ ಗ್ರಾ.ಪಂ.ವ್ಯಾಪ್ತಿಯಲ್ಲಿ ನಡೆಯಿತು. ವೀರಕಂಭ ಗ್ರಾ.ಪಂ.ನಲ್ಲಿ ಒಟ್ಟು 14 ಸ್ಥಾನಗಳಲ್ಲಿ ಬಿ.ಜೆ.ಪಿ 4 ಸ್ಥಾನಗಳನ್ನು ಪಡೆದುಕೊಂಡು 10 ಸ್ಥಾನಗಳನ್ನು ಕಳೆದುಕೊಂಡಿತ್ತು. ಪರಾಭವಗೊಂಡ ಅಭ್ಯರ್ಥಿಗಳಾದ ಪದ್ಮಾವತಿ, ಚಂದ್ರಶೇಖರ ಬಂಗೇರ, ರವೀಂದ್ರ, ಗಣೇಶ್ ಭಟ್, ವೀರಪ್ಪ ಮೂಲ್ಯ, ಭಾರತಿ, ಚಂದ್ರ ಸಪಲ್ಯ, ಜಯಂತಿ, ಚಂದ್ರಶೇಖರ್ ಶೆಟ್ಟ ಮತ್ತು ವಿಶಾಲಾಕ್ಷಿ ಅವರ ಮನಗೆ ಬೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜೇಶ್ ನಾಕ್ ಆವರು ಪಕ್ಷವನ್ನು ಇನ್ನಷ್ಟು ಬಲಪಡಿಸುವಲ್ಲಿ ಕಾರ್ಯಕರ್ತರ ಶ್ರಮ ಪಕ್ಷಕ್ಕೆ ಬೇಕಾಗಿದೆ, ಹಾಗಾಗಿ ಕಾರ್ಯಕರ್ತರ ವೈಯಕ್ತಿಕ ವಿಚಾರ, ವೈಮನಸ್ಸುಗಳನ್ನು ಬಿಟ್ಟು ಪಕ್ಷದ ಗೆಲುವಿನ ದೃಷ್ಟಿಯಿಂದ ಕೆಲಸ ಮಾಡಿ ಎಂದು ಹೇಳಿದರು. ಇನ್ನು ಮುಂದಿನ ದಿನಗಳಲ್ಲಿ ಸರಕಾರದ ಸವಲತ್ತುಗಳನ್ನು ಪ್ರತಿಯೊಬ್ಬರ ಮನೆಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಎಲ್ಲರೂ ಮಾಡಿದಾಗ ಗ್ರಾಮದ ಜನರ ವಿಶ್ವಾಸವನ್ನು ಕಾರ್ಯಕರ್ತರು ಪಡೆಯಲು ಸಾಧ್ಯವಾಗುತ್ತದೆ.
ಆ ನಿಟ್ಟಿನಲ್ಲಿ ಕೆಲಸಮಾಡಿ ಎಂದು ಕಾರ್ಯ ಕರ್ತರಿಗೆ ಕರೆ ನೀಡಿದರು. ಕಷ್ಟ ಮತ್ತು ಸುಖ ಎರಡರಲ್ಲೂ ಹೆಚ್ಚು ಹೆಚ್ಚು ಭಾಗಿಯಾದಾಗ ನಂಬಿಕೆ ಉಳಿಯಲು ಸಾಧ್ಯ ಎಂದರು. ರಾಜಕೀಯದಲ್ಲಿ ಸೋಲು ಗೆಲುವು ಅದು ಸಾಮಾನ್ಯ . ಆದರೆ ಸೋಲನ್ನು ಛಾಲೇಂಜ್ ಆಗಿ ತೆಗೆದುಕೊಂಡು ಕಾರ್ಯ ಪ್ರವೃತ್ತರಾದಾಗ ಗೆಲವು ನಮ್ಮದಾಗುತ್ತದೆ ಎಂದು ಅವರು ಫರಾಭವಗೊಂಡ ಅಭ್ಯರ್ಥಿಗಳಿಗೆ ದೈರ್ಯ ತುಂಬುವ ಕೆಲಸ ಮಾಡಿದರು.
ದೇವದಾಸ ಶೆಟ್ಟಿ, ವಿಶ್ವನಾಥ, ಸದಾಶಿವ, ಶೇಖರ್ ಕಾನೆಕೋಡಿ, ಜಯಂತಿ ಜನಾರ್ಧನ, ಪದ್ಮವಾತಿ ಚಂದ್ರಶೇಖರ, ಚಂದ್ರಿಕಾ, ಸೀಮಾ ಮಾಧವ, ಭಾರತಿಸುಂದರ, ಪಧ್ಮನಾಭ, ಚಂದಪ್ಪ, ರಾಮಣ್ಣ, ಅಬ್ದುಲ್ ಸತ್ತಾರ್, ಲಕ್ಷಣ್ ಪೂಜಾರಿ ಮತ್ತು ಪವನ್ ಉಪಸ್ಥಿತರಿದ್ದರು.
