ಮೂಡುಬಿದರೆ: ಬಹುಮುಖ ಬಾಲಕಲಾವಿದೆ ಅಯನಾ ವಿ.ರಮಣ್ ಅವರಿಗೆ ದಾವಣಗೆರೆಯ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆಯು ಬಾಲಸರಸ್ವತಿ ಎಂಬ ಬಿರುದು ನೀಡಿ ಸನ್ಮಾನಿಸಿದೆ.
ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಕಲಾಕುಂಚ ಸಂಸ್ಥೆಯ ಆಶ್ರಯದಲ್ಲಿ ನಡೆಸಿಕೊಂಡು ಬರುತ್ತಿರುವ ರಾಜ್ಯಮಟ್ಟದ ಕನ್ನಡ ಕೌಸ್ತುಭ, ಕನ್ನಡ ಕುವರ, ಕನ್ನಡ ಕುವರಿ ಪುರಸ್ಕಾರಗಳ ಬೆಳ್ಳಿಹಬ್ಬದ ಪ್ರಯುಕ್ತ ದಾವಣಗೆರೆಯಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವಾ ಅವರು ಅಯನಾ ಬಿರುದು ಪ್ರದಾನ ಮಾಡಿ ಸನ್ಮಾನಿಸಿದರು.

ಕನ್ನಡ ಭಾಷೆಯಲ್ಲಿ 120 ಕ್ಕೂ ಮಿಕ್ಕಿ ಅಂಕಗಳನ್ನು ಪಡೆದ ರಾಜ್ಯದ 1000 ಕ್ಕೂ ಅಧಿಕ 10 ನೇ ತರಗತಿಯ ವಿದ್ಯಾಥರ್ಿಗಳನ್ನು ಸನ್ಮಾನಿಸಲಾಯಿತು.
ಕಲಾಕುಂಚದ ಅಧ್ಯಕ್ಷ ಕೆ.ಹೆಚ್.ಮಂಜುನಾಥ್, ಡಾ.ಚಂದ್ರಪ್ಪ, ಕಲಾಕುಂಚದ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ, ಜ್ಯೋತಿ ಗಣೇಶ್ ಶೆಣೈ, ಪ್ರಧಾನ ಕಾರ್ಯದಶರ್ಿ ರೇವಣ ಸಿದ್ದಪ್ಪ ಕೆ.ಹೆಚ್., ಯಕ್ಷರಂಗದ ಅಧ್ಯಕ್ಷ ಮಲ್ಯಾಡಿ ಪ್ರಭಾಕರ ಶೆಟ್ಟಿ, ಪ್ರಧಾನ ಕಾರ್ಯದಶರ್ಿ ಬೇಳೂರು ಸಂತೋಷ್ ಕುಮಾರ್ ಶೆಟ್ಟಿ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷೆ ರೇಖಾ ಓಂಕಾರಪ್ಪ, ಅಯನಾ ಹೆತ್ತವರಾದ ಕೆ.ವಿ.ರಮಣ್-ಮೂಕಾಂಬಿಕಾ ಜಿ.ಎಸ್.ದಂಪತಿ ಉಪಸ್ಥಿತರಿದ್ದರು.
