ಮೂಡುಬಿದರೆ: ಬೆಳ್ತಂಗಡಿ ಗ್ರಾಮದ ನೆರಿಯಾದಲ್ಲಿ ದಲಿತರೋರ್ವನ ಬೆರಳುಗಳನ್ನು ಕತ್ತರಿಸಿದ ಭೀಕರ ಘಟನೆಗೆ ಸಂಬಂಧಿಸಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಕರಾವಳಿ ವಿಭಾಗ (ಎಸ್.ಸಿ.) ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಆರೋಪಿಯನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಸಂತ್ರಸ್ತರಿಗೆ ಸೂಕ್ತ ರಕ್ಷಣೆ, ನ್ಯಾಯ ದೊರಕಿಸಿಕೊಡುವಂತೆ ಎಂದು ಸಮಿತಿಯ ಮುಖ್ಯಸ್ಥ ಶಿವಾನಂದ ಪಾಂಡ್ರು ಪ್ರಕಟಣೆಯಲ್ಲಿ ಆಗ್ರಹಿಸಿದರು.
