ವಿಟ್ಲ: ನಮ್ಮ ಜಮೀನನ್ನು ಯಾವುದೇ ಕಾರಣಕ್ಕೆ ಸರ್ಕಾರ ಸ್ವಾಧೀನ ಪಡಿಸಿಕೊಳ್ಳಬಾರದು. ನಾವು ಸಾಯುವವರೆಗೆ ಇದೇ ಭೂಮಿಯಲ್ಲಿ, ನಮ್ಮ ಜಾಗದಲ್ಲೇ ಬದುಕುವಂತೆ ಪೂರ್ತಿ ಅವಕಾಶ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಗೌರವ ಸಲಹೆಗಾರ ಮುರುವ ಮಹಾಬಲ ಭಟ್ ಹೇಳಿದರು.
RAITA SANGA
ಅವರು ಭಾನುವಾರ ಪಾಣೆಮಂಗಳೂರು ನಂದಾವರದಲ್ಲಿ ನಡೆದ ರೈತ ಜನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.ನಮ್ಮ ಭೂಮಿಯಲ್ಲಿ ಬದುಕುವ ಹಕ್ಕು ನಮಗಿದ್ದು, ಓಡಿ ಹೋಗುವಂತಹಾ ಸ್ಥಿತಿಯನ್ನು ಸರ್ರಕಾರ ನಿರ್ಮಾಣ ಮಾಡಬಾರದು.ಪರಶುರಾಮ ಸೃಷ್ಠಿಯ ನೇತ್ರಾವತಿ ತಟದಲ್ಲಿರುವ ನಮ್ಮನ್ನು ಒಕ್ಕಲೆಬ್ಬಿಸುವ ವಿಚಾರಕ್ಕೆ ಪ್ರತಿಭಟಿಸುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ಕರ್ನಟಕ ರಾಜ್ಯ ರೈತ ಸಂಘ ಹಸಿರು ಸೇನೆ ದ ಕ ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲಗುತ್ತು ಮಾತನಾಡಿ ನೇತ್ರಾವತಿಯಲ್ಲಿ ನಿರ್ಮಾಣವಾಗುತ್ತಿರುವ ಅಣೆಕಟ್ಟು 4 ಮೀ ಎಂದು ಹೇಳಿಕೊಂಡು 7 ಮೀ ವರೆಗಿನ ಭೂಸ್ವಾಧೀನ ಪ್ರಕ್ರಿಯೆ ನಡೆಸಬೇಕೆಂದು ಜಿಲ್ಲಾಡಳಿತ ಹೇಳುತ್ತಿದೆ. ಇನ್ನೊಂಡೆಯಲ್ಲಿ 13 ಮೀ ಎತ್ತರ ಎಂಬ ಲೆಕ್ಕವನ್ನೂ ತೋರಿಸಲಾಗುತ್ತಿದೆ. ಸರ್ಕಾರ ದಿಂದ ಪಡೆದ ಮಾಹಿತಿಯಲ್ಲಿ 1083 ಎಕ್ರೆ ಮುಳುಗಡೆಯಾಗಲಿದೆ ಎಂದು ಹೇಳಲಾಗಿದೆ. ಸರ್ಕಾರವೇ ರಿಯಲೆಸ್ಟೇಟ್ ದಂದೆ ನಡೆಸುವ ಹಾಗೆ ಸುಳ್ಳು ಮಾಹಿತಿಗಳನ್ನು ನೀಡುತ್ತಾ, ಪರಿಹಾರ ಕೊಡದೆ ಒಕ್ಕಲೆಬ್ಬಿಸಲು ಮುಂದಾಗಿರುವಂತೆ ಕಾಣುತ್ತಿದೆ. ಕೃಷಿ ಭೂಮಿಯನ್ನು ಬರಡಾಗಿಸಿ ಪಟ್ಟಣದಲ್ಲಿ ಕುಳಿತವರು ಐಶಾಮಿ ಜೀವನ ನಡೆಸಲು ಕೃಷಿಕರ ನೀರನ್ನು ಕೊಂಡೊಯ್ಯುವ ಕೆಲಸ ಮಾಡುವುದು ಬೇಡ. ಪೇಟೆಯ ಮಂದಿ ಹಳ್ಳಿಗೆ ಬಂದು ನೆಲೆಸಲಿ.ರೈತರನ್ನು ಎಬ್ಬಿಸುವ ಕೆಲಸವನ್ನು ರೈತ ಸಂಘದ ಕಡೆಯಿಂದ ಮಾಡಲಾಗುವುದು ಎಂದು ಹೇಳಿದರು.

ಕನರ್ಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ದ ಕ ಜಿಲ್ಲಾ ಸಮಿತಿ ಸಂಘಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ ಕುಪ್ಪೆಪದವು, ತುಂಬೆ ಸಂತ್ರಸ್ತ ರೈತರ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ ಸುಬ್ರಹ್ಮಣ್ಯ ಭಟ್ ಮಾತನಾಡಿದರು.

ಈ ಸಂದರ್ಭ ರೈತ ಸಂಘ ಹಸಿರು ಸೇನೆಯ ಶರತ್ ಕುಮಾರ್, ಸುದೇಶ್ ಮಯ್ಯ, ತುಂಬೆ ಸಂತ್ರಸ್ತ ರೈತರ ಹೋರಾಟ ಸಮಿತಿ ಕಾರ್ಯದರ್ಶಿ ಎನ್ ಕೆ ಇದಿನಬ್ಬ, ಸುರೇಶ್ ಶೆಟ್ಟಿ, ಎಂ ಆರ್ ಅಶ್ರಫ್, ನರೇಶ್ ಹೊಳ್ಳ, ವಾಸುದೇವ ಮಯ್ಯ, ಪ್ರಕಾಶ್ ಆಚಾರ್ಯ, ಪ್ರಭಾಕರ ಗೌಡ, ಪದ್ಮನಾಭ ಗೌಡ, ನರಸಿಂಹ ಮತ್ತಿತರರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *