ಬಂಟ್ವಾಳ,ಜು.26: ಸಮಾಜದ ಹಿತಕ್ಕಾಗಿ ಸೇವೆ ಸಲ್ಲಿಸುವ ಕೆಲಸ ಸಂಘಟನೆಗಳ ಸಾಲಿನಲ್ಲಿ ಇಂದು ಗುರುತಿಸಲ್ಪಟ್ಟ ದ.ಕ.ಗ್ಯಾರೇಜ್ ಮ್ಹಾಲಕರ ಸಂಘ ಬಂಟ್ವಾಳ ವಲಯವು ಒಂದು ಮಾದರಿ ಸಂಘೆವಾಗಲಿ. ಇನ್ನಷ್ಟು ಸೇವೆ ಮಾಡುವ ಶಕ್ತಿ ದೇವರು ಸಂಘಟನೆಗೆ ನೀಡಲಿ ಎಂದು ಬಂಟ್ವಾಳ ಉಪ ವಿಭಾಗ ಎಎಸ್ಪಿ ರಾಹುಲ್ ಕುಮಾರ್ ಎಸ್.ಹೇಳಿದರು.
KAR_6472
ಅವರು ಜು. 26ರಂದು ಬಿ.ಸಿ.ರೋಡ್ ಗಾಣದಪಡ್ಪು ನಾರಾಯಣ ಗುರು ಸಭಾಭವನದಲ್ಲಿ ಯೆನಪೋಯ ಸ್ಪೆಶಾಲಿಟಿ ಆಸ್ಪತ್ರೆ ಮಂಗಳೂರು ಸಹಭಾಗಿತ್ವದಲ್ಲಿ ನಡೆದ ಹೃದಯರೋಗ ಮತ್ತು ಮಧುಮೇಹ ತಪಾಸಣೆ ಶಿಬಿರ ಉದ್ಘಾಟನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು..
ಒಳ್ಳೆಯ ಕೆಲಸಕ್ಕೆ ಇಲಾಖೆಯಿಂದ ಪೂರ್ಣ ಬೆಂಬಲವಿದೆ. ವೈಯಕ್ತಿಕವಾಗಿಯೂ ಸಾಧ್ಯ ಇರುವ ಎಲ್ಲಾ ಸಹಕಾರ ನೀಡುವುದಾಗಿ ಇದೇ ಸಂದರ್ಭ ಭರವಸೆ ನೀಡಿದರು.
ಬಿಲ್ಲವ ಸಂಘ ಬಂಟ್ವಾಳ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ಯಾರೇಜ್ ಮಾಲಕರ ಸಂಘ ಬಂಟ್ವಾಳ ಅಧ್ಯಕ್ಷ ಸುಧಾಕರ್ ಸಾಲಿಯಾನ್ ಮಾತನಾಡಿ ಜಿಲ್ಲೆಯ ಯಾವುದೇ ಕಾರ್ಯಕ್ರಮದಲ್ಲಿ ಬಂಟ್ವಾಳ ಸಂಘಕ್ಕೆ ಮಹತ್ತರ ಪಾತ್ರವಿದೆ. ಕಾರ್ಯಕ್ರಮದ ಮಟ್ಟಿಗೆ ಬಂಟ್ವಾಳ ಪ್ರಥಮ, ವಿಟ್ಲ ಸಂಘ ದ್ವಿತೀಯ ಸ್ಥಾನವನ್ನು ಪಡೆಯುತ್ತಿದೆ. ಇದೊಂದು ಹೆಮ್ಮೆಯ ವಿಚಾರ. ನಾವು ಅನೇಕ ಒಳ್ಳೆಯ ಕೆಲಸಗಳನ್ನು ಹಮ್ಮಿಕೊಂಡು ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ನುಡಿದರು.
ವೇದಿಕೆಯಿಂದ ಡಾ| ಸಂತೋಷ್ ಬಾಬು, ಕೇಂದ್ರ ಸಂಘದ ಉಪಾಧ್ಯಕ್ಷ ರಾಮಪ್ಪ, ಡಾ| ಹರೀಶ್ ಆರ್. ನಾಯರ್, ಡಾ| ಕೃಷ್ಣ ಶೆಟ್ಟಿ, ಡಾ| ರಾಹುಲ್ ಮಾತನಾಡಿದರು.ಸಂಘಟನೆಯ ಪರವಾಗಿ ವಸಂತ್ ಮಂಗಳೂರು ಮಾಹಿತಿ ನೀಡಿದರು.

ಸಂಘದ ಉಪಾಧ್ಯಕ್ಷ ವಿಶ್ವನಾಥ ಬಿ., ಕೋಶಾಕಾರಿ ಜಗದೀಶ ರೈ, ಸಂಘಟನಾ ಕಾರ್ಯದರ್ಶಿ ಗಣೇಶ್ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುರೇಶ್ ಕುಲಾಲ್ ಸ್ವಾಗತಿಸಿ, ಕಾರ್ಯದರ್ಶಿ ರಾಜೇಶ ವಂದಿಸಿದರು. ಸಂತೋಷ್ ಕುಮಾರ್ ತುಂಬೆ ಕಾರ್ಯಕ್ರಮ ನಿರ್ವಹಿಸಿದರು.
ಮಧ್ಯಾಹ್ನದ ನಂತರವೂ ತಪಾಸಣೆ ಪರಿಶೀಲನೆ ನಡೆಸಲಾಯಿತು. ಒಟ್ಟು 207 ಮಂದಿ ಹೆಸರು ನೋಂದಾಯಿಸಿ ಶಿಬಿರದ ಸದುಪಯೋಗ ಪಡೆಯುವಂತೆ ಯಶಸ್ವಿಯಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

By suddi9

Leave a Reply

Your email address will not be published. Required fields are marked *