ಸಿಡ್ನಿ: ಅಂತೂ ಇಂತೂ ಕಣ್ಮರೆಯಾದ ಮಲೇಶಿಯಾದ ಎಂಎಚ್-370 ವಿಮಾನದ ಮಹತ್ವದ ಸುಳಿವು ಪತ್ತೆಯಾಗಿದೆ. ವಿಮಾನದಲ್ಲಿ ಏನಾಯ್ತು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನೊಳಗೊಂಡ ವಿಮಾನದ ಬ್ಲಾಕ್ ಬಾಕ್ಸ್`ನ ಸಿಗ್ನಲ್ ಹಿಂದೂ ಮಹಾಸಾಗರದಲ್ಲಿ ಹುಡುಕಾಟ ನಡೆಸುತ್ತಿದ್ದ ಆಸ್ಟ್ರೇಲಿಯಾದ ಹಡಗಿನಲ್ಲಿ ಅಳವಡಿಸಲಾಗಿರುವ ಬ್ಲಾಕ್ ಬಾಕ್ಸ್ ಡಿಟೆಕ್ಟರ್`ಗೆ ಸಿಕ್ಕಿದೆಯಂತೆ.

MH370 plane

ಸತ್ಯವಾಗಿಯೂ ಇದೊಂದ ನಂಬಲರ್ಹ ಮಾಹಿತಿಯಾಗಿದ್ದು, ಬ್ಲಾಕ್ ಬಾಕ್ಸ್ ಸಿಗ್ನಲ್ ನಿರಂತರವಾಗಿ ಡಿಟೆಕ್ಟರ್`ಗೆ ಸಿಗುತ್ತಿದೆ. ಹೀಗಾಗಿ ನಾಪತ್ತೆಯಾದ ವಿಮಾನದ ಬಗ್ಗೆ ಸಂಪೂರ್ಣ ಮಾಹಿತಿಸಿಗುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯಾದ ಅಧಿಕಾರಿ ಆಂಗಸ್ ಹೌಸ್ಟನ್ ತಿಳಿಸಿದ್ದಾರೆ. ಆಸ್ಟ್ರೇಲಿಯಾದ ಉತ್ತರ ಕರಾವಳಿಯಲ್ಲಿ 2 ಸಿಗ್ನಲ್`ಗಳು ಪತ್ತೆಯಾಗಿವೆ. ಸಿಕ್ಕಿರುವ ಎರಡೂ ಸಿಗ್ನಲ್`ಗಳು ಆಡಿಯೋ ಸಂಬಂಧಿತ ಮಾಹಿತಿಗಳಾಗಿದ್ದು, ಒಂದು ವಿಮಾನದ ಡಾಟಾ ರೆಕಾರ್ಡರ್ ಮತ್ತೊಂದು ಕಾಕ್ ಪಿಟ್ ವಾಯ್ಸ್ ರೆಕಾರ್ಡರ್ ಇದ್ದಿರಬಹುದೆಂದು ಅಧಿಕಾರಿಗಳು ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *