ಮಾಧ್ಯಮ ಗೌರವ ಭಾವನೆ ಮೂಡಿಸಲಿ: ಡಾ. ಎಂ.ಮೋಹನ್ ಆಳ್ವ
ಮೂಡುಬಿದರೆ: ಸಮಾಜದ ಮೌಲ್ಯ ಕಾಪಾಡಬೇಕಾದ ಪತ್ರಿಕೆ, ದೃಶ್ಯ ಹಾಗೂ ಅಂತಜರ್ಾಲ ಮಾಧ್ಯಮ ಜನರಲ್ಲಿ ಭೀತಿಯನ್ನೊಡ್ಡುವ ಬದಲು ಜನರಲ್ಲಿ ಭಯಮುಕ್ತ ಗೌರವದ ಭಾವನೆಯನ್ನು ಮೂಡಿಸಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿಪ್ರಾಯಪಟ್ಟರು.
ಮೂಡುಬಿದರೆಯನ್ನು ಕೇಂದ್ರವಾಗಿಸಿಕೊಂಡು ಪ್ರಾರಂಭಗೊಳ್ಳುವ `ಬಿದಿರೆ’ ವೆಬ್ಸೈಟ್ ಅನ್ನು ಮೂಡುಬಿದರೆ ಸಮಾಜ ಮಂದಿರದಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಮಾಧ್ಯಮ ಕ್ಷೇತ್ರದ ಮೇಲೆ ಜನರು ನಂಬಿಕೆಯಿರಿಸಿದ್ದಾರೆ. ಅದರಲ್ಲಿ ಬರುವ ಸುದ್ದಿವಿಚಾರಗಳು ಸತ್ಯ ಎಂದು ತಿಳಿದುಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಓದುಗರು ಜಾಹಿರಾತುದಾರರ ನಡುವೆ ಸಮತೋಲನ ಸಾಧಿಸಿ ಮೌಲ್ಯವನ್ನು ಕಾಪಾಡಬೇಕಾಗಿದೆ. ಸುದ್ದಿ ಮಾಡುವ ಧಾವಂತದಲ್ಲಿ ಗೊಂದಲ ಸೃಷ್ಟಿಯಾಗದ ರೀತಿಯಲ್ಲಿ ಮಾಧ್ಯಮಗಳು ಕೆಲಸ ನಿರ್ವಹಿಸಬೇಕಾಗಿದೆ ಎಂದು ಆಳ್ವ ಹೇಳಿದರು.
ಕಲ್ಲಬೆಟ್ಟು ಎಕ್ಸ್ಲೆಂಟ್ ಪಿಯು ಕಾಲೇಜಿನ ಅಧ್ಯಕ್ಷ ಯುವರಾಜ್ ಜೈನ್ ಲೋಗೋ ಅನಾವರಣಗೊಳಿಸಿ ಮಾತನಾಡಿ ನಮ್ಮಲ್ಲಿರುವ ನಕಾರತ್ಮಕ ಅಂಶಗಳನ್ನು ಹೊರಗೆಗಿಳಿಸಿದಾಗ ಸಾಧನೆ ಮಾಡಲು ಸಾಧ್ಯ ಎಂದರು
ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಮೌಲ್ಯ ಜೀವನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಎಸ್ಕೆಎಫ್ ಸಮೂಹ ಸಂಸ್ಥೆಯ ಅಧ್ಯಕ್ಷ ಜಿ. ರಾಮಕೃಷ್ಣ ಆಚಾರ್, ಉದ್ಯಮಿ ಅಶ್ವಿನ್ ಜೆ.ಪಿರೇರಾ ಉಪಸ್ಥಿತರಿದ್ದರು.
ಬಿದಿರೆ. ಕಾಂ ಸಂಪಾದಕ ಯಶೋಧರ ವಿ. ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಧನಂಜಯ ಮೂಡುಬಿದರೆ ಕಾರ್ಯಕ್ರಮ ನಿರೂಪಿಸಿದರು. ಪ್ರಸನ್ನ ಹೆಗ್ಡೆ ವಂದಿಸಿದರು.

