ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಗ್ರಾ.ಪಂ. ಚುನಾವಣೆಯಲ್ಲಿ ಪರಾಭವ ಗೊಂಡ ಗ್ರಾ.ಪಂ. ಸದಸ್ಯರ ಮನೆಗೆ ಭೇಟಿ ಎಂಬ ವಿನೂತನ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪಾಡಿಗುತ್ತು ಕನ್ಯಾನದಲ್ಲಿ ಚಾಲನೆ ನೀಡಿದರು. ನಂತರ ಚುನಾವಣೆಯಲ್ಲಿ ಸ್ಫರ್ಧಿಸಿ ಸೋಲು ಅನುಭವಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಮನೆಗೆ ಭೇಟಿ ನೀಡಿದರು.

ಕೆಪಿ ರಘುರಾಮ ಶೆಟ್ಟಿ, ಪುಷ್ಪ ಮಹಾಬಲ, ಮುರಳೀಕೃಷ್ಣ ಭಟ್, ಭಾರತಿರವೀಂದ್ರ ಬೆಳ್ಚಡ, ಸತ್ಯಾವತಿಮೋಹನ್ದಾಸ್ ಶೆಟ್ಟಿ, ಸಂತೋಷ್ ಮೂಲ್ಯ, ದಮಯಂತಿರಮೇಶ್ ಗೌಡ, ಭಾಸ್ಕರ್ ಪೂಜಾರಿ, ಮನೋಜ್ ಮಡಿವಾಳ, ರತಿ, ದೇವ ಕುಮಾರ್, ಧರ್ಣಮ್ಮ ಪರಮೇಶ್ವರ ಗೌಡ, ಚಂದ್ರಶೇಖರ್ ಪೂಜಾರಿ, ವನಜಾಜಯರಾಮ್ ಮೂಲ್ಯ, ಭಾರತಿತಿಮ್ಮಪ್ಪ ನಾಯ್ಕ್, ಉದಯರಮಣ ಭಟ್ ಅವರ ಮನೆಗೆ ಭೇಟಿ ನೀಡಿ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಿದರು. ಕನ್ಯಾನ ಗ್ರಾ.ಪಂ.ನಲ್ಲಿ 20ಜನ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪರಾಜಯಗೊಂಡಿದ್ದು, ಅವರ ಮನೆಗೆ ಭೇಟಿ ನೀಡಿದ ಸಂದರ್ಭ ಸೋಲು-ಗೆಲುವು ರಾಜಕೀಯದಲ್ಲಿ ನಿಶ್ಚಿತ, ಸೋಲನ್ನು ಸವಾಲಾಗಿ ಸ್ವೀಕರಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಪಕ್ಷದ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡು ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡೋಣವೆಂದು ಉಳಿಪಾಡಿಗುತ್ತು ರಾಜೇಶ್ ನಾಯಕ್ ಹೇಳಿದರು.
ಈ ಸಂದರ್ಭ ಜಿ.ಪಂ. ಸದಸ್ಯೆ ಶೈಲಜಾ ಭಟ್, ಜಿ. ಉಪಾಧ್ಯಕ್ಷ ದೇವದಾಸ್ ಶೆಟ್ಟಿ, ಜಿ.ಸಮಿತಿ ಸದಸ್ಯ ಲಿಂಗಪ್ಪ ಗೌಡ, ಗುರುಪ್ರಸಾದ್, ಲೋಕೇಶ್ ಸಿ.ಎಚ್, ನವೀನ ಕನ್ಯಾನ, ವೇದಾವತಿ, ಶ್ರೀಕಾಂತ್, ಯೋಗೀಶ, ಪವನ್ ಕುಮಾರ್ ಶೆಟ್ಟಿ, ದೀಕ್ಷಿತ್ ಕಣಿಯೂರು, ಸುದರ್ಶನ್ ಶೆಟ್ಟಿ, ಗಣೇಶ್ ಶೆಟ್ಟಿ ಉಪಸ್ಥಿರಿದ್ದರು


