ಸೃಜನಾತ್ಮಕ ಕಲ್ಪನೆಗಳು ವಿದ್ಯಾರ್ಥಿ ಮನಸ್ಸಿನಲ್ಲಿ ನಿರಂತರ ಮೂಡುತ್ತಿರಬೇಕು ಎಂದು ತುಮಕೂರು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಹೇಳಿದರು.ಇವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಕಾಲೇಜಿನ ಸ್ವಾಮಿ ವಿವೇಕಾನಂದ ಬಳಗದ ವತಿಯಿಂದ ನಡೆದ ವಿದ್ಯಾರ್ಥಿ ಜೀವನದ ಸವಾಲುಗಳು; ಸ್ವಾಮಿ ವಿವೇಕಾನಂದ ಪರಿಹಾರ ಎಂಬ ವಿಷಯದ ಕುರಿತು ಮಾತನಾಡಿದರು.

ಆಧುನಿಕ ಸಮೂಹ ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗಿ ಮನಸ್ಸು ವಿಕೃತವಾಗದೆ ಮಲ್ಲಿಗೆಯಂತೆ ಲವಲವಿಕೆಯಿಂದ ಕೂಡಿರಬೇಕು. ನೈತಿಕತೆ, ಮಾನವಿಯತೆಯ ಆದರ್ಶ ಗುಣಗಳು ವಿದ್ಯಾರ್ಥಿ ಭವಿಷ್ಯದ್ದುಕ್ಕೂ ಸಾರ್ಥಕ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ನುಡಿದರು.
ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಅಧ್ಯಕ್ಷತೆ ವಹಿಸಿದರು. ಸ್ವಾಮಿ ವಿವೇಕಾನಂದ ಬಳಗದ ಸಂಯೋಜಕಿ ಪ್ರೋ. ಭಾರತಿ ಎಸ್. ಭಟ್ ಸ್ವಾಗತಿಸಿದರು. ವಿದ್ಯಾರ್ಥಿ ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿ ವಿದ್ಯಾರ್ಥಿ ಮೇಧಾ ರಾಮಕುಂಜ ವಂದಿಸಿದರು.
