ಬಂಟ್ವಾಳ-ಮೂಡುಬಿದ್ರೆ ರಸ್ತೆ ಮತ್ತು ರಾಯಿ-ಕೈತ್ರೋಡಿ ರಸ್ತೆ ನಡುವೆ ರಸ್ತೆ ಬದಿ ಈಚೆಗೆ ತರಾತುರಿಯಲ್ಲಿ ಜೆಸಿಬಿ ಮೂಲಕ ನಡೆಸಿದ ಚರಂಡಿ ಹೂಳೆತ್ತುವ ಕಾಮಗಾರಿಯಿಂದ ಕುಡಿಯುವ ನೀರಿನ ಪೈಪ್ ಒಡೆದು ಹೋಗಿ ಸ್ಥಳೀಯ ಬಾರ್ಜಾರು ಮತ್ತು ಕೈತ್ರೋಡಿ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದ್ದರೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮೌನವಾಗಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

