ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಪುರಸಭೆ ನಿರ್ಮಿಸಿದ ಬಸ್‍ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣ ಹಿಂಬದಿ ಕಸದ ರಾಶಿ ಮತ್ತು ತ್ಯಾಜ್ಯವು ಮಳೆಗೆ ರಸ್ತೆಯಿಡೀ ಹರಡಿಕೊಂಡು ದುರ್ವಾಸನೆ ಬೀರುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯ ವರ್ತಕರು ಆರೋಪಿಸಿದ್ದಾರೆ.

