ಮುಂಬಯಿ (ಉಳ್ಳಾಲ), ಜೂ.26: ಎಸ್ಎಸ್ಎಫ್ ಉಳ್ಳಾಲ ಸೆಕ್ಟರ್ ಅಧೀನದಲ್ಲಿ ಕಾರ್ಯ ಚರಿಸುತ್ತಿರುವ ಅಲ್-ಅಮೀನ್ ರಿಲೀಫ್ ಫೌಂಡೇಶನ್ (ಎಆರ್ಎಫ್) ಮತ್ತು ಕಾರಂದೂರು ಮರ್ಕಝ್ನ ಶಿಲ್ಪಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಮತ್ತು ಮರ್ಕಝ್ ಡೈರೆಕ್ಟರ್ ಎ.ಪಿ.ಅಬ್ದುಲ್ ಹಕೀಂ ಅಝ್ಹರಿ ನೇತೃತ್ವದಲ್ಲಿ ನಡೆಸುತ್ತಿರುವ ರಿಲೀಫ್ ಸಂಘಟನೆ ರಿಲೀಫ್ ಆಂಡ್ ಚಾರಿಟೇಬಲ್ ಫೌಂಡೇಶನ್ ಆಫ್ ಇಂಡಿಯ (ಆರ್ಸಿಎಫ್ಐ)ದ ಸಹಯೋ ಗದೊಂದಿಗೆ ಇತ್ತೀಚೆಗೆ ವಿದ್ಯುತ್ ಸ್ಪರ್ಶಿಸಿ ನಿಧನರಾದ ಉಳ್ಳಾಲ ಮೇಲಂಗಡಿ ನಿವಾಸಿ ಮರ್ಹೂಂ ಅಬ್ದುರ್ರಶೀದ್ರವರ ಐದು ಮಕ್ಕಳನ್ನು ದತ್ತು ತೆಗೆದುಕೊಳ್ಳಲಾಯಿತು.

ಅಲ್-ಅಮೀನ್ ರಿಲೀಫ್ ಪೌಂಡೇಶನ್ ಮತ್ತು ರಿಲೀಫ್ ಸಂಘಟನೆ ರಿಲೀಫ್ ಆಂಡ್ ಚಾರಿಟೇಬಲ್ ಫೌಂಡೇಶನ್ ಆಫ್ ಇಂಡಿಯಾದ ಕಾರ್ಯಕರ್ತರು ಮರ್ಹೂಂ ಅಬ್ದುರ್ರಶೀದ್ರವರ ಮನೆಗೆ ಬೇಟಿ ನೀಡಿ ಐದು ಮಕ್ಕಳಿಗೆ ಬೇಕಾಗುವ ಶಾಲಾ ಸಮಾಗ್ರಿ ಮತ್ತು 3 ತಿಂಗಳಿಗೆ ಬೇಕಾಗುವ ಖರ್ಚು ವೆಚ್ಚದ ಮೊತ್ತ ನೀಡಿದರು.
ಮರ್ಹೂಂ ಅಬ್ದುಲ್ ರಶೀದ್ ಐದು ಮಕ್ಕಳಿಗೆ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚ, ಈ ಕುಟುಂಬಕ್ಕೆ ಬೇಕಾಗುವ ಕರ್ಚು ವಚ್ಚಕ್ಕೆ ಮೂರು ತಿಂಗಳಿಗೊಮ್ಮೆ 25,000 ರೂ ನೀಡಲು ಆರ್ಸಿಎಫ್ಐ ತೀರ್ಮಾನಿಸಿದೆ. ಬಡವರಿಗೆ ಉತ್ತಮ ಜೀವನ ಕಲ್ಪಿಸುವುದು, ಶೈಕ್ಷಣಿಕ ನೆರವು, ಆರೋಗ್ಯ ಮತ್ತು ಪೌಷ್ಟಿಕತೆ, ಅನಾಥ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ, ಅಂಗವಿಕಲ ವೃದ್ಧರು ಮತ್ತು ವಿಧವೆಯರಿಗೆ ನೆರವು, ಆಹಾರ ಸರಬರಾಜು, ಮಸೀದಿ ಮತ್ತು ಮದ್ರಸಾ ನಿರ್ಮಾಣ, ಬಾವಿ ಮತ್ತು ಕೊಳವೆ ಬಾವಿ ನಿರ್ಮಾಣ ಮಾಡುವುದು ರಿಲೀಫ್ ಆಂಡ್ ಚಾರಿಟೇಬಲ್ ಫೌಂಡೇಶನ್ ಆಫ್ ಇಂಡಿಯಾದ ಮುಖ್ಯ ಉದ್ದೇಶವಾಗಿದೆ ಎಂದು ಆರ್ಸಿಎಫ್ಐನ ಮೆನೇಜರ್ ಅಬ್ದುರ್ರಶೀದ್ ಕ್ಯಾಲಿಕೆಟ್ ಹೇಳಿದರು.
ಮರ್ಕಝ್ನ ಎಚ್.ಆರ್ ಮೆನೇಜರ್ ಅಮೀರ್ ಹಸನ್ ಆಸ್ಟ್ರೇಲಿ0ಾ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳನ್ನು ಹುಡುಕಿ ಅವರಿಗೆ ನೆರವು ನೀಡುವ ಮತ್ತು ಶೈಕ್ಷಣಿಕವಾಗಿ ಸಹಕಾರ ನೀಡುವ ಉದ್ದೇಶದಿಂದ 2000ರಲ್ಲಿ ಈ ಚಟುವಟಿಕೆಗೆ ಚಾಲನೆ ನೀಡಲಾಯಿತು. ರಿಲೀಫ್ ಆಂಡ್ ಚಾರಿಟೇಬಲ್ ಫೌಂಡೇಶನ್ ಆಫ್ ಇಂಡಿ0ಾ ಕೇರಳದ ಕಲ್ಲಿಕೋಟೆ0ುಲ್ಲಿ ಅಸ್ತಿತ್ವದಲ್ಲಿರುವ ಚಾರಿಟೇಬಲ್ ಸಂಘಟನೆ0ಾಗಿದೆ. ವಿದ್ಯುತ್ ಸ್ಪರ್ಶಿಸಿ ನಿಧನರಾದ ಅಬ್ದುರ್ರಶೀದ್ ಮತ್ತು ಅವರಿಗಿರುವ 5 ಮಕ್ಕಳ ವಿವರ ಅಂತ್ರಜಾಲ ಮತ್ತು ಎಸ್ಎಸ್ಎಫ್ ಕಾರ್ಯಕರ್ತರ ಮೂಲಕ ತಿಳಿಯಲು ಸಾಧ್ಯವಾಯಿತ್ತು. ನಮ್ಮಗೆ ಮಾಹಿತಿ ತಿಳಿದ ಕ್ಷಣವೆ ದತ್ತು ಸ್ವೀಕಾರಿಸಲು ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಮತ್ತು ಮರ್ಕಝ್ ಡೈರೆಕ್ಟರ್ ಎ.ಪಿ. ಅಬ್ದುಲ್ ಹಕೀಂ ಅಝ್ಹರಿ ತೀರ್ಮಾನಿಸಿದ್ದಾರೆ ಎಂದು ಅವರು ಹೇಳಿದರು
ಮರ್ಕಝ್ನ ಅಸಿಸ್ಟೆಂಟ್ ಜನರಲ್ ಮೆನೇಜರ್ ಉನೈಸ್ ಅಹ್ಮದ್, ಎ.ಪಿ ಉಸ್ತಾದರ ಪರ್ಸನಲ್ ಸೆಕ್ರೆಟರಿ ಡಾ| ಅಬೂಬಕ್ಕರ್ ನಿಝಾಮಿ, ಕೆ.ಸಿ.ಎಫ್ ರಿಯಾದ್ ಘಟಕದ ಕಾರ್ಯಕರ್ತ ಸಾದಾತ್ ಕೋಟೆಪುರ, ಅಲ್-ಅಮೀನ್ ರಿಲೀಫ್ ಫೌಂಡೇಶನ್, ಉಳ್ಳಾಲ ಕೋಶಾಧಿಕಾರಿ ಉಮರ್ ಫಾರೂಕ್, ಲೆಕ್ಕ ಪರಿಶೋಧಕ ಫಾರೂಕ್, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪ್ರ| ಕಾರ್ಯದರ್ಶಿ ಸೆಯ್ಯಿದ್ ಖುಬೈಬ್ ತಂಙಳ್, ಕೋಶಾಧಿಕಾರಿ ಇಲ್ಯಾಸ್ ಕೈಕೋ, ಉಪಾಧ್ಯಕ್ಷ ಮುಹಮ್ಮದ್ ಮದನಿ, ಎಸ್.ವೈ.ಎಸ್. ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸ್ಹಾಕ್, ಎಸ್ಎಸ್ಎಫ್ ಅಕ್ಕರೆಕೆರೆ ಶಾಖೆಯ ಅಧ್ಯಕ್ಷ ನವಾಝ್ ಸಖಾಫಿ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಎ.ಆರ್.ಎಫ್ ಪ್ರ| ಕಾರ್ಯದರ್ಶಿ ಮುಸ್ತಾಫ ಮಾಸ್ಟರ್ ಮುಕ್ಕಚ್ಚೇರಿ ಸ್ವಾಗತಿಸಿದರು, ಸೆಯ್ಯಿದ್ ಮದನಿ ದಅವಾ ಕಾಲೇಜ್ ಪ್ರೊಫೆಸರ್ ಇಬ್ರಾಹಿಂ ಅಹ್ಸನಿ ವಂದಿಸಿದರು.





