ಸುದ್ದಿ9 ಬೆಳ್ತಂಗಡಿ : ಬೆಳ್ತಂಗಡಿ ಕಡೆಯಿಂದ ಪೆಟ್ರೋಲ್ ಟ್ಯಾಂಕರ್ ಲಾರಿ ಯೊಂದು ನಾಯಿಲ ಎಂಬಲ್ಲಿ ಎದುರು ಗಡೆಯ ವಾಹನವನ್ನು ಹಿಂದಿಕ್ಕುವ ಅವಸರದಲ್ಲಿ ಬೈಕ್ ಗೆ ಡಿಕ್ಕಿ ಹೊಡೆದು ಎದುರಿನಲ್ಲಿರುವ ವಿದ್ಯುತ್ ಕಂಬಕ್ಕೆ ಗುದ್ದಿ ಬೆಂಕಿ ತಗುಲಿದ ಘಟನೆ ಜೂ.24ರಂದು ಸಂಜೆ ನಡೆದಿದೆ.

ಪೆಟ್ರೋಲ್ ಟ್ಯಾಂಕರ್ ಲಾರಿಯು ಬೆಳ್ತಂಗಡಿ ಕಡೆಯಿಂದ ಧರ್ಮಸ್ಥಳ ಮಾರ್ಗದಲ್ಲಿ ಸಂಚರಿಸುವಾಗ ಈ ಅವಘಡ ಸಂಭವಿಸಿದೆ. ಟ್ಯಾಕರ್ಗೆ ಹಿಡಿದ ಬೆಂಕಿಯನ್ನು ನಂದಿಸಲು ಸಾದ್ಯಾವಗದೆ ಸಂಪೂರ್ಣ ಟ್ಯಾಂಕರ್ ಸುಟ್ಟು ಭಸ್ಮವಾಗಿದೆ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.


