ಮುಂಬಯಿ: ಅರ್ಜುನ್ ಕಾಪಿಕಾಡ್ ಮೈನವಿರೇಳಿಸುವ ಸಾಹಸ ಮಾಡಿದಾಗ ಯುವಕರು ಸಿಳ್ಳೆ ಹೊಡೆದರು. ಅದೇ ಮುಂಬಯಿಯಲ್ಲಿ ತೆರೆಗೆ`ಕುಸಲ್ದ ಬಿರ್ಸೆ’ ಸಂದೀಪ್ ಶೆಟ್ಟಿ ಅವರನ್ನು ತುಳು ಸಿನಿಮಾದ `ಪಟಾಕಿ’ ಎಂದೇ ಖ್ಯಾತಿಯಾಗುತ್ತಿರುವ ಅನ್ವಿತ ಸಾಗರ್ ತನ್ನ ತುಂಟತನದಿಂದ ಬೇಸ್ತುಬೀಳಿಸಿದಾಗ ತುಳುವರು ಬಿದ್ದು ಬಿದ್ದು ನಕ್ಕರು. ಹಾಸ್ಯದ ಮೂಲಕವೇ ತುಳು ಚಿತ್ರಗಳು ಛಾಪುಮೂಡಿಸಿರುವ ಕಾಲದಲ್ಲಿ ಹಾಸ್ಯಮಾಡಲೆಂದೇ ದೀಪಕ್ ಪಾಲಡ್ಕ, ಉಮೇಶ್ ಮಿಜಾರ್, ರಂಜನ್ ಬೋಲೂರು, ಸುಭಾಷ್ ಬಂಗೇರ, ಮಂಜು ರೈ ಮುಳೂರು ಮುಂತಾದವರ ಸಂಗಮ ಚಿತ್ರವನ್ನು ಎಲ್ಲೂ ಬೋರು ಹೊಡೆಸದೆ ಜನರನ್ನು ರಂಜಿಸಿತು.
News article Pic

shodahn 2

ಫೇಸ್ ಬುಕ್, ಟ್ವಿಟ್ಟರ್ ಎಲ್ಲೂ ನೋಡಿದರೂ ಚಿತ್ರದ ಬಗ್ಗೆ ಹೊಗಳಿಕೆಯ ಮಾತುಗಳು. ಇವೆಲ್ಲಾ ಗಮನಿಸಿತ್ತಿದ್ದ ಮುಂಬಯಿಯ ತುಳುವರಂತೂ, ಈ ಮನರಂಜನೆಯ `ದಂಡ್’ ಮುಂಬಯಿಗೆ ಯಾವಾಗ ಬರುತ್ತದೆ ಎಂದು ತುದಿಗಾಲಲ್ಲಿ ಕಾಯುತ್ತಿದ್ದರು. ದೋಸೆ ಬಿಸಿಯಾಗಿರುವಾಗಲೆ ತಿನ್ನಲು ರುಚಿಯಿರುತ್ತದೆ ಎಂದು ಅರಿತ್ತಿರುವ ನಿರ್ಮಾಪಕರು ದಂಡ್ ಅನ್ನು ಮುಂಬಯಿ ಮಹಾನಗರಿಯಲ್ಲಿ ಈಗಾಗಲೇ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ. ಜೂನ್ 29ರಿಂದ, ಮುಂಬಯಿ ನಗರದಾದ್ಯಂತ ತೆರೆಕಾಣಲಿರುವ ದಂಡ್ ಮುಂಬಯಿ ತುಳುವರನ್ನು ರಂಜಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಸಾಮಾಜಿಕ ಸಂದೇಶವಿರುವ ಈ ಚಿತ್ರ ಪ್ರತೀಯೊಬ್ಬರೂ ನೋಡಲೇಬೇಕೆಂದು, ಎಲ್ಲಾ ಸಂಘ ಸಂಸ್ಥೆಗಳು ನಿರ್ಮಾಪಕ ಶೋಧನ್ ಪ್ರಸಾದ್ ಅವರಿಗೆ ತಮ್ಮ ಸಂಪೂರ್ಣ ಸಹಕಾರ ನೀಡಲಿದ್ದಾರೆ. ಮಕ್ಕಳಿಗೆ ಮನರಂಜನೆಯ ಜೊತೆಗೆ ಸಂದೇಶ ನೀಡುವ ಈ ಚಿತ್ರ ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ತೋರಿಸಿ, ಅವರಿಗೆ ಡ್ರಗ್ಸ್ ಮತ್ತು ಮಹಿಳಾ ದೌರ್ಜನ್ಯದ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *