ಅಧಿಕಾರಿಗಳು ಜನಸ್ನೇಹಿಯಾದರೆ ಜನರು ಸಹೃದಯರಾಗುತ್ತಾರೆ
ಬಂಟ್ವಾಳ: ಅಧಿಕಾರಿಗಳು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿದರೆ ಸಾರ್ವಜನಿಕರು ಸಹೃದಯರಾಗಿ ನಮ್ಮೊಂದಿಗೆ ಸಹಕರಿಸುತ್ತಾರೆ ಎಂದು ತಾಲೂಕು ಕಾರ್ಯನಿರ್ವಹಕ ದಂಡಾಧಿಕಾರಿ, ತಹಸೀಲ್ದಾರ್ ಪುರಂದರ ಹೆಗ್ಡೆ ಅವರು ತಿಳಿಸಿದರು.

ಬಂಟ್ವಾಳ ತಾಲೂಕು ಪಂಚಾಯಿತಿ ಎಸ್‍ಜೆಎಸ್‍ಆರ್‍ವೈ ಸಭಾಂಗಣದಲ್ಲಿ ನಡೆದ ಕಂದಾಯ ನಿರೀಕ್ಷಕ ಸಾಧು ಅವರ ಸೇವಾ ನಿವೃತ್ತಿ ಪ್ರಯುಕ್ತ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕರನ್ನು ಅಧಿಕಾ ರಿಗಳು ಮತ್ತು ಸಿಬ್ಬಂದಿಗಳು ಗೌರವದಿಂದ ಕಾಣಬೇಕು. ಅವರೊಂದಿಗೆ ಸಂಯಮ, ಸೌಜನ್ಯದಿಂದ ವರ್ತಿಸಬೇಕು. ಸಾರ್ವಜನಿಕ ಜೀವನದಲ್ಲಿ ನಾವು ಸಲ್ಲಿಸುವ ನಿಷ್ಕಳಂಕ, ಪ್ರಾಮಾಣಿಕ ಸೇವೆಯನ್ನು ಜನರು ಸೇವಾ ನಿವೃತ್ತಿಯ ಬಳಿಕವೂ ಗುರುತಿಸುವಂತೆ ಇರಬೇಕೆಂದು ಸಲಹೆ ನೀಡಿದರು.
ಬಂಟ್ವಾಳ ನಾಡಕಚೇರಿಯ ಕಂದಾಯ ನಿರೀಕ್ಷಕ ಸಾಧು ಅವರನ್ನು ಸನ್ಮಾನಿಸಿದ ಅವರು, ಅಧಿಕಾರಿಗಳ ಕಾರ್ಯದಕ್ಷತೆಯನ್ನು ಪ್ರಶಂಸಿದರು. ಉಪತಹಸೀಲ್ದಾರ್‍ಗಳಾದ ಪರಮೇಶ್ವರ ನಾಯಕ್, ಜೆ.ಪಿ.ರೋಡ್ರಿಗಸ್, ಪರಮೇಶ್ವರ ಮೊಯಿಲಿ, ನಿವೃತ್ತ ಉಪತಹಸೀಲ್ದಾರ್ ರೋಹಿನಾಥ್, ಪಾಣೆಮಂಗಳೂರು ನಾಡಕಚೇರಿಯ ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ, ವಿಟ್ಲ ನಾಡಕಚೇರಿ ಉಪತಹಸೀಲ್ದಾರ್ ದಿವಾಕರ್ ಈ ಸಂದರ್ಭ ಶುಭ ಹಾರೈಸಿದರು. ಕರ್ನಾಟಕ ಸರಕಾರಿ ಸಂಘ, ಗ್ರಾಮ ಲೆಕ್ಕಾಧಿಕಾರಿಗಳ ಸಂಘ, ಗ್ರಾಮ ಸಹಾಯಕರ ಸಂಘ, ಪತ್ರಕರ್ತರ ಸಂಘದ ಪದಾಧಿಕಾರಿಗಳು ಅಧಿಕಾರಿಗಳನ್ನು ಅಭಿನಂದಿಸಿದರು.
