ಬಂಟ್ವಾಳ:ತಾಲ್ಲೂಕಿನ ಜಮೀಯ್ಯತುಲ್ ಫಲಾಹ್ ಘಟಕದ ವಾರ್ಷಿಕ ಮಹಾಸಭೆಯು ಘಟಕಾಧ್ಯಕ್ಷ ನೋಟರಿ ಅಬೂಬಕ್ಕರ್ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಮೆಲ್ಕಾರ್ ನಲ್ಲಿ ನಡೆಯಿತು.
ಇದೇ ವೇಳೆ ಜಮೀಯ್ಯತುಲ್ ಫಲಾಹ್ ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುಲ್ ಲತೀಫ್ ಸಾಹೇಬ್ ಮತ್ತು ಅಬ್ಬೋನು ಮದ್ದಡ್ಕ ಇವರ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು.
ಪದಾಧಿಕಾರಿಗಳು:

ಅಧ್ಯಕ್ಷರಾಗಿ ಬಿ. ಮುಹಮ್ಮದ್ ತುಂಬೆ, ಉಪಾಧ್ಯಕ್ಷರಾಗಿ ಬಿ.ಎಂ. ಅಬ್ಬಾಸ್ ಆಲಿ ಬೋಳಂತೂರು, ಅಬ್ದುಲ್ ರಝಾಕ್ ಅನಂತಾಡಿ, ಪ್ರಧಾನ ಕಾರ್ಯದರ್ಶಿ ಯಾಗಿ ಎಂ.ಎಚ್.ಇಕ್ಬಾಲ್, ಜೊತೆ ಕಾರ್ಯದರ್ಶಿಯಾಗಿ ಸುಲೈಮಾನ್ ಸೂರಿಕುಮೇರು, ಕೋಶಾಧಿಕಾರಿಯಾಗಿ ಕೆ.ಕೆ. ಶಾಹುಲ್ ಹಮೀದ್, ಸಂಘಟನಾ ಕಾರ್ಯದರ್ಶಿಯಾಗಿ ಹಮೀದ್ ಗೋಳ್ತಮಜಲು, ಪತ್ರಿಕಾ ಕಾರ್ಯದರ್ಶಿಯಾಗಿ ಲತೀಫ್ ನೇರಳಕಟ್ಟೆ ಆಯ್ಕೆಗೊಂಡರು. ಇದೇ ವೇಳೆ 13 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆಗೊಳಿಸಲಾಯಿತು.

ಘಟಕ ಕಾರ್ಯದರ್ಶಿ ಕೆ.ಕೆ. ಶಾಹುಲ್ ಹಮೀದ್ ಸ್ವಾಗತಿಸಿ, ಕೋಶಾಧಿಕಾರಿ ಎಂ.ಎಚ್. ಇಕ್ಬಾಲ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಜೊತೆ ಕಾರ್ಯದರ್ಶಿ ಹಮೀದ್ ಗೋಳ್ತಮಜಲು ವರದಿ ವಾಚಿಸಿದರು. ಅಬ್ದುಲ್ ರಹಿಮಾನ್ ಕೇಪು ವಂದಿಸಿದರು. ಲೇಖಕ ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *