ಮೂಡುಬಿದಿರೆ : ಸಮಾಜದಲ್ಲಿ ಅತೀ ನಿರ್ಲಕ್ಷ್ಯಕ್ಕೆ ಒಳಗಾಗುವವರಾರೆಂದರೆ ಅವರು ಕೈದಿಗಳು. ಅವರನ್ನು ನಾವೆಲ್ಲರೂ ಸದಾ ಅಪರಾಧ ಸ್ಥಾನದಲ್ಲೇ ನೋಡುವ ನಮ್ಮ ಸಹಜ ಮನೋಭಾವ ಬದಲಾಗಬೇಕು. ಎಂದು ಮೈಸೂರು ಕಾರಾಗೃಹ ಅಕ್ಷಕಿ ದಿವ್ಯಶ್ರೀ ಅಭಿಪ್ರಾಯಪಟ್ಟರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ,ಕರ್ನಾಟಕ ಕಾರಾಗೃಹಗಳ ಇಲಾಖೆ, ಯ ಮೈಸೂರಿನ `ಸಂಕಲ್ಪ ‘ ಕಲಾಸಂಘ ಮತ್ತು ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ವಿದ್ಯಾಗಿರಿಯ ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ 6 ದಿನಗಳ ಕಾಲ ನಡೆದ `ಕಾರಾಗೃಹವಾಸಿಗಳ ನಾಟಕೋತ್ಸವ-ರಂಗಯಾತ್ರೆ’ಯು ಗುರುವಾರ ಸಮಾಪನಗೊಂಡಿದ್ದು ಈ ಸಂದರ್ಭ ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡಿದ ಅವರು ಕೈದಿಗಳ ಸುಧಾರಣೆ, ಬಿಡುಗಡೆಯ ಬಳಿಕ ಪುನರ್ವಸತಿ ಹಾಗೂ ಪುನರ್ ಸಾಮಾಜೀಕರಣ ಅಗತ್ಯವಾಗಿ ನಡೆಯಬೇಕಾಗಿದೆ’ ಎಂದು ಹೇಳಿ `ಜೈಲಿನಿಂದ ಹೊರಬಂದವರನ್ನು ಸ್ವಾಗತಿಸಿ ಮತ್ತೆ ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಸಿಕೊಳ್ಳುವ ಸಹೃದಯತೆಯನ್ನು ನಾಗರಿಕರನ್ನು ತೋರಬೇಕು’ ಎಂದು ವಿನಂತಿಸಿದರು.

nataka1

nataka2

ಉಡುಪಿ ಕಾರಾಗೃಹ ಅಧೀಕ್ಷಕಿ ಸೌಮ್ಯ ಉಪಸ್ಥಿತರಿದ್ದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಮಾತನಾಡಿ ತಮಗೆ ಅರಿವಿದ್ದೋ ಅರಿವಿಲ್ಲದೆಯೋ ತಪ್ಪು ಮಾಡಿರುವ ಕೈದಿಗಳಿಗೆ ಇದೀಗ ತಪ್ಪಿನ ಅರಿವಾಗಿದೆ. ಈ ಎಲ್ಲರ ಮನಸ್ಸನ್ನು ಪರಿವರ್ತಿಸುವ ಜತೆಗೆ ನಾಗರಿಕ ಮನಸ್ಸನ್ನೂ ಪರಿವರ್ತಿಸುವ ಶಕ್ತಿಯು ರಂಗಯಾತ್ರೆಗಿದೆ. ಮುಂದಿನ ನುಡಿಸಿರಿ ಸಂದರ್`ದಲ್ಲಿ ಸಹಸ್ರಗಟ್ಟಲೆ ಪ್ರೇಕ್ಷಕರೆದುರು ಈ ಕಲಾವಿದರ ನಾಟಕಗಳನ್ನು ಇಲಾಖೆಯ ಸಹಕಾರದೊಂದಿಗೆ ಪ್ರದರ್ಶಿಸುವ ಇರಾದೆ ಇದೆ’ ಎಂದು ಆಳ್ವರು ಹೇಳಿದರು. .

ರಂಗ ನಿರ್ದೇಶಕ ಜೀವನ್ರಾಂ ಸುಳ್ಯ ವಂದಿಸಿದರು.
ಆರುದಿನಗಳಲ್ಲಿ ಪೊಲೀಸ್ `ಭದ್ರತೆಯೊಂದಿಗೆ `ಮಾರನಾಯಕ’, `ಜತೆಗಿರುವನು ಚಂದಿರ’ (ನಿ: ಹುಲುಗಪ್ಪ ಕಟ್ಟೀಮನಿ)ಮತ್ತು `ಸೂಳೆ ಸನ್ಯಾಸಿ’ (ನಿ: ಜೀವನ್ಕುಮಾರ್ ಹೆಗ್ಗೋಡು) ನಾಟಕಗಳ ಎರಡೆರಡು ಪ್ರದರ್ಶನದೊಂದಿಗೆ ನಿತ್ಯವೂ ಅಪರಾ`, ಅಪರಾಗಳ ವಿಶ್ಲೇಷಣೆಯ, ಪಿ. ಶೇಷಾದ್ರಿ ನಿರ್ದೇಶನದ `ಸಂಕಲ್ಪ’ ಸಾಕ್ಷ್ಯ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.

 

By suddi9

Leave a Reply

Your email address will not be published. Required fields are marked *