ಮೂಡುಬಿದಿರೆ: ಯುವಜನ ಸೇವೆ ಇಲಾಖೆಯಿಂದ ಮೂಡುಬಿದಿರೆಯಲ್ಲಿ ಈಗಾಗಲೇ ಉತ್ತಮ ಗುಣಮಟ್ಟದ ಸಿಂಥೆಟಿಕ್ ಟ್ರ್ಯಾಕ್ ಮತ್ತು ಈಜುಕೊಳ ನಿರ್ಮಾಣವಾಗಿದೆ ಮುಂದೆ ಅತೀ ಶೀಘ್ರವಾಗಿ ಸ್ವರಾಜ್ ಮೈದಾನದಲ್ಲಿ ಟೆನ್ನಿಸ್ ಕೋಟ್ ಹಾಗೂ ಜ್ಯೋತಿ ನಗರದಲ್ಲಿರುವ ಗಾಂಧೀ ಪಾರ್ಕ್ನಲ್ಲಿ ಎಳೆಯ ಮಕ್ಕಳಿಗಾಗಿ ರೋಲರ್ ಸ್ಕೇಟಿಂಗ್ ರಿಂಗ್ ನಿರ್ಮಾಣ ಮಾಡಲಾಗುವುದು ಎಂದು ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.

13 mood gandhi park veeksane (3) (1)
ಅವರು ಇಲ್ಲಿನ ಸಮಾಜ ಮಂದಿರ ಸಭಾದ ಅಧೀನಲ್ಲಿದ್ದು ಇದೀಗ ಪುರಸಭೆಗೆ ಹಸ್ತಾಂತರಗೊಂಡಿರುವ ಜ್ಯೋತಿನಗರದ ಗಾಂಧೀ ಪಾರ್ಕ್  ಪುರಸಭಾ ವತಿಯಿಂದ 18ಲಕ್ಷ ರೂವಿನಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಕಾಮಗಾರಿಗಳನ್ನು ಶನಿವಾರ ವೀಕ್ಷಿಸಿ ಮಾಧ್ಯಮದೊಂದಿಗೆ ಮಾತನಾಡಿದರು.
ಮೂಡುಬಿದಿರೆ ಪುರಸಭೆಯು ಜನಪರವಾದ ಕಾರ್ಯಗಳನ್ನು ಕೈಗೊಳ್ಳುತ್ತಿದ್ದು ಈ ನಿಟ್ಟಿನಲ್ಲಿ ಗಾಂಧೀ ಪಾರ್ಕ್ ನಲ್ಲಿ ವಾಕಿಂಗ್ ಟ್ರ್ಯಾಕ್, ವಿದ್ಯುತ್ ದೀಪದ ವ್ಯವಸ್ಥೆ, ಹೈಮಾಸ್ಕ್ ವ್ಯವಸ್ಥೆ, ನೆಲಕ್ಕೆ ಇಂಟರ್ಲಾಕ್ ಅಳವಡಿಕೆ ಹಾಗೂ ಪ್ರತಿಮೆಯನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ ಎಂದರು. ಅಲ್ಲದೆ ಪುರಸಭೆಯೇ ರೋಲರ್ ಸ್ಕೇಟಿಂಗ್ ರಿಂಗ್ ನಿರ್ಮಾಣ ಮಾಡಬೇಕೆಂದು ಮೊದಲಿಗೆ ಹೇಳಿದರು. ಇದಕ್ಕೆ ಮಧ್ಯೆ ಪ್ರವೇಶಿಸಿ ಮಾತನಾಡಿದ ಪುರಸಭಾ ಸದಸ್ಯ ಪಿ.ಕೆ ಥೋಮಸ್ ಅವರು ಸ್ಕೇಟಿಂಗ್ ರಿಂಗ್ನ್ನು ಕ್ರೀಡಾ ಇಲಾಖೆಯ ಅನುದಾನದಿಂದಲೇ ಮಾಡಬೇಕೆಂದು ಕೇಳಿಕೊಂಡಾಗ ಓಕೆ ಯುವಜನ ಸೇವೆ ಇಲಾಖೆಯಿಂದಲೇ ಅನುದಾನವನ್ನು ಭರಿಸಲಾಗುವುದು ಎಂದು ಭರವಸೆ ನೀಡಿದರು.
ಪುರಸಭಾ ಅಧ್ಯಕ್ಷೆ ಸುಪ್ರಿಯಾ.ಡಿ.ಶೆಟ್ಟಿ, ಉಪಾಧ್ಯಕ್ಷೆ ಎಲಿಜಾ ಮಿನೇಜಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೇಘನಾಧ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಬಶೀರ್, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಮೂಡಾ ಸದಸ್ಯ ಸುರೇಶ್ ಪ್ರಭು, ಪುರಸಭಾ ಸದಸ್ಯರಾದ ಕೊರಗಪ್ಪ, ರೂಪಾ ಶೆಟ್ಟಿ, ಪುರಸಭಾ ಇಂಜಿನಿಯರ್ ದಿನೇಶ್ ಮತ್ತಿತರರು ಈ ಸಂದರ್ಭದಲ್ಲಿದ್ದರು.

By suddi9

Leave a Reply

Your email address will not be published. Required fields are marked *