ಸುದ್ದಿ9 ಕೈಕಂಬ: ಅಡ್ಡೂರು,ಪೊಳಲಿ, ಪುಂಚಮೆ,ಬಡಕಬೈಲ್, ಅಮ್ಮುಂಜೆ ಆಸುಪಾಸಿನ ಗ್ರಾಮೀಣ ಜನರಿಗೆ ವಾರದ ಪ್ರತೀ ಬುಧವಾರ ಬೆಳಗ್ಗೆ 9 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ ಉಚಿತ ತಪಾಸಣೆ ಹಾಗೂ ವ್ಯದ್ಯಕೀಯ ಪ್ರಯೋಜನ ಪಡೆಯುವಂತಾಗಳು ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ದೇ ರಳಕಟ್ಟೆ ಮಂಗಳೂರು ಇವರು ರಿಫಾ ಪಾಲಿ ಕ್ಲಿನಿಕ್ ಅಡ್ಡೂರು ಇದರ ಸಹಯೋಗದೊಂದಿಗೆ ಜೂ 10ರಂದು ಬುಧವಾರ ಆರೋಗ್ಯ ಕೇಂದ್ರವನ್ನು ತೆರೆದಿದ್ದಾರೆ. ಇದರ ಉದ್ಘಾಟನೆಯನ್ನು ವಿಧಾನ ಸಭಾ ಸದಸ್ಯ ಐವನ್ ಡಿ ಸೋಜ ಮಾಡಿದರು.
ಮುಜಿಬ್ರಹಿಮಾನ್ ನಿಝಾಮಿ ಆಲ್-ಕಾದ್ರಿ ಅಡ್ಡೂರು ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಕಣಚೂರು ಆಸ್ಪತ್ರೆಯ ಡ್ಯರೆಕ್ಟರ್ ಹಾಜಿ ಯು.ಕೆ ಮೋನ್, ಡಾ| ಕಾಜಾ ನಸೀರುದ್ಧೀನ್, ಜನಾಬ್ ವಿ ಅಬ್ದುಲ್ ಲತೀಫ್ ವಗ್ಗ , ಡಾ|ನಾಸೀರ್ ಉಸೇನ್ ಕಿಲ್ಪಾಡಿ, ಎಕೆ ಅಶ್ರಫ್ ಅಡ್ಡೂರು,ಹಾಜಿ ಇಬ್ರಾಹಿಂ ಕೊಯಾರ್, ರಿಫಾ ಪಾಲಿ ಕ್ಲಿನಿಕ್ ಇಲ್ಲಿಯ ಡಾ| ಸಿದ್ದೀಖ್, ಗ್ರಾ.ಪಂ.ಸದಸ್ಯರಾದ ಎ.ಕೆ. ರಿಯಾದ್, ಮಹಮ್ಮದ್ಸಾದಿಕ್, ಎ.ಕೆ ಮಹಮ್ಮದ್ ಉಪಸ್ತಿತರಿದ್ದರು. ಶುಭಕರ ಅಂಚನ್ ನಿರೂಪಿಸಿ. ಆಸಿಫ್ ವಂದಿಸಿದರು.









