ಶಿವಕುಮಾರ ಮಾಳಿಗೆ ಎಂದು ಇವರ ಹೆಸರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಸಪ್ಪನಮಾಳಿಗೆ ಗ್ರಾಮದವರು. ಶಿಕ್ಷಣ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಇವರು ಇದೀಗ ಭಾವಜೀವಿಯ ಮೌನ ಎಂಬ ತಮ್ಮ ಚೊಚ್ಚಲ ಕವನ ಸಂಕಲನ ಪ್ರಕಟಣೆಯ ಮೂಲಕ ಸಾಹಿತ್ಯ ಲೋಕಕ್ಕೆ ದಿಟ್ಟ ಹೆಜ್ಜೆ ಇಟ್ಟವರು.
ಶಿವಕುಮಾರ ಮಾಳಿಗೆ ಅವರಿಗೆ ಬಾಲ್ಯದಿಂದಲೇ ಓದುವ ಹವ್ಯಾಸ. ಓದಿದ ಮೇಲೆ ತಾನು ಏನನ್ನಾದರೂ ಬರೆಯಬೇಕೆಂಬ ಹಂಬಲ. ಜತೆಯಲ್ಲಿ ಭಾವನೆಯೊಂದಿಗೆ ಬೆಸೆದುಕೊಂಡ ಬದುಕು. ಇವೆಲ್ಲದರ ಸಮಾಗಮವೆಂಬಂತೆ ಇದೀಗ 200ಕ್ಕೂ ಹೆಚ್ಚು ಹನಿಗವನವುಳ್ಳ ಭಾವಜೀವಿಯ ಮೌನ ಎಂಬ ಕವನ ಸಂಕಲನದ ಪ್ರಕಟಣೆ.
photo1ವಿದ್ಯಾರ್ಥಿ ದೆಸೆಯಲ್ಲಿಯೇ ಬರಹದ ನಂಟು ಬೆಳೆಸಿಕೊಂಡಿದ್ದ ಶಿವಕುಮಾರ ಅವರು ಹಲವಾರು ಸಾಹಿತ್ಯಗಳನ್ನು ರಚಿಸಿದ್ದಾರೆ, ರಾಜ್ಯದ ನಾನಾ ಕಡೆಗಳಲ್ಲಿನ ಕವನ ಕಮ್ಮಟ, ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ವೃತ್ತಿ ಬದುಕಿನ ಜತೆಯಲ್ಲೇ ಸಾಹಿತ್ಯ ಕ್ಷೇತ್ರದ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಪದವಿ ಶಿಕ್ಷಣದ ತಕ್ಷಣ ಬಂಟ್ವಾಳದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ವೃತ್ತಿ ಬದುಕಿಗೆ ಕಾಲಿಟ್ಟ ಶಿವಕುಮಾರ ಅವರು ಅಲ್ಲಿಂದಲೇ ತನ್ನ ಸಾಹಿತ್ಯ ಬದುಕಿಗೂ ಮುಂದಡಿ ಇಟ್ಟು ಸುಮಾರು 200ಕ್ಕೂ ಹೆಚ್ಚು ಹನಿಗವನಗಳನ್ನು ರಚಿಸಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಉತ್ತಮ ಸಹಕಾರವೂ ದೊರೆತಿದೆ. ಇತ್ತೀಚೆಗೆ ಬೆಂಗಳೂರಿನ ಪೇಸ್ ಪೌಂಢೇಶನ್ ಟ್ರಸ್ಟ್ ಆಹ್ವಾನದ ಮೇರೆಗೆ ಈ ಹನಿಗವನಗಳನ್ನು ಶಿವಕುಮಾರ್ ಕಳುಹಿಸಿದ್ದು ಅಲ್ಲಿ ಇವೆಲ್ಲವೂ ಆಯ್ಕೆಯಾಗಿ ಇದೀಗ ಕವನ ಸಂಕಲನ ರೂಪದಲ್ಲಿ ಪ್ರಕಟಗೊಂಡು ಲೋಕಾರ್ಪಣೆಯಾಗುತ್ತಿದೆ. ಕವಿ ಹೆಚ್.ಎಸ್ ವೆಂಕಟೇಶ್ ಮೂರ್ತಿ , ಕಿರುತೆರೆ ನಿರ್ದೇಶಕ ಎನ್ ಸೀತಾರಾಮ್, ಪತ್ರಕರ್ತರಾದ ಹರಿಪ್ರಕಾಶ್ ಕೋಣೆ ಮನೆ, ತಿಮ್ಮಪ್ಪ ಭಟ್,.ರವಿ ಹೆಗಡೆ, ಗ್ರಂಥಾಲಯ ಇಲಾಖೆಯ ಮಹಾನಿರ್ದೇಶಕ ಸತೀಶ ಹೊಸಮನಿ, ಲೇಖಕರಾದ ಜೋಗಿ ಮತ್ತು ಎ. ಆರ್ ಮಣಿಕಾಂತ್ ಭಾಗವಹಿಸಲಿದ್ದಾರೆ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಓದು ಮತ್ತು ಬರಹ ನನ್ನ ಹವ್ಯಾಸವಾಗಿದೆ. ಈ ಕವನಗಳು ನನ್ನ ಬದುಕಿನ ಅವಿಭಾಜ್ಯ ಅಂಗಗಳು. ನಾನು ಚಿಕ್ಕಂದಿನಿಂದಲೂ ಭಾವನೆಗಳ ಜೊತೆಯಲ್ಲಿಯೇ ಹೆಚ್ಚು ಬದುಕಿದವನು. ಹಾಗಾಗಿ ಭಾವಜೀವಿಯ ಮೌನ ಎಂಬ ಹೆಸರಿನಲ್ಲಿ ನನ್ನ ಇನ್ನೂರು ಕವನಗಳ ಸಂಕಲನ ಬಿಡುಗಡೆಗೊಳ್ಳುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಸಹಿತ ಎಲ್ಲಾ ಅಧಿಕಾರಿವರ್ಗ, ಸಹದ್ಯೋಗಿಗಳು ಪ್ರೋತ್ಸಾಹ ನೀಡುತ್ತಿದ್ದಾರೆ ಎನ್ನುತ್ತಾರೆ ಶಿವಕುಮಾರ.

ಬಂಟ್ವಾಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿವಕುಮಾರ ಮಾಳಿಗೆಯವರ ಭಾವಜೀವಿಯ ಮೌನ ಎಂಬ ಕವನ ಸಂಕಲನ ಜೂ.7 ರಂದು ಬೆಂಗಳೂರು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ತಿಳಿಸಿದ್ದಾರೆ.
ಕಛೇರಿಯಲ್ಲಿ ಗುರುವಾರ ಬೆಳಿಗ್ಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕವಿ ಮನಸ್ಸು ಹೊಂದಿದ ಶಿವಕುಮಾರ್ ಅವರಿಗೆ ಸಾಹಿತ್ಯದ ಮೇಲೆ ಅಪಾರ ಒಲವು ಇದೆ. ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸುವ ಜತೆಯಲ್ಲಿ ಓದುವ, ಬರೆಯುವ ಹವ್ಯಾಸವನ್ನು ವಿಶೇಷವಾಗಿ ಬೆಳೆಸಿಕೊಂಡಿದ್ದಾರೆ. ಅವರ ಸಾಹಿತ್ಯ ಪ್ರೀತಿಯ ಬಗ್ಗೆ ನಮಗೆ ಅಭಿಮಾನವಿದೆ. ಇವರ ಕವನಗಳಲ್ಲಿ ಪ್ರೀತಿ, ಪ್ರೇಮ, ಖುಷಿ,ನೋವು, ಪರಿಸರ ಪ್ರಜ್ಞೆಯ ಭಾವಗಳು ಅಡಗಿದೆ ಎಂದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಗುರುನಾಥ್ ಬಾಗೇವಾಡಿ, ಶಿಕ್ಷಣ ಸಂಯೋಜಕಿ ಸುಜಾತ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *