ಮೂಡುಬಿದಿರೆ: ರಾಜಕೀಯ ಪಕ್ಷಗಳ ಭವಿಷ್ಯಕ್ಕೆ ಮುನ್ನುಡಿ ಎಂಬಂತಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮೂಡುಬಿದಿರೆ ಹೋಬಳಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ದಾಖಲಿಸುವ ಮೂಲಕ ಗ್ರಾಮ ಮಟ್ಟದಲ್ಲಿ ಎಲ್ಲೆಂದರಲ್ಲಿ ಕಮಲ ಅರಳಿದೆ. ಹೋಬಳಿಯ 12 ಪಂಚಾಯತ್ಗಳ ಪೈಕಿ 6 ಪಂಚಾಯತ್ಗಳಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಇತರೆಡೆ ಅಭೂತ ಪೂರ್ವ ಗೆಲುವು ದಾಖಲಿಸುವ ಮೂಲಕ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಬದಲಾವಣೆಯ ಗಾಳಿ ಬೀಸಿರುವ ಸೂಚನೆ ರವಾನಿಸಿದ್ದಾರೆ. 193 ಸ್ಥಾನಗಳ ಪೈಕಿ 105 ಕ್ಕೂ ಮಿಕ್ಕಿದ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಕಮಲ ಪಾಳಯ ಗೆಲುವಿನ ಶತಕ ಸಿಡಿಸಿ ಸಂಭ್ರಮಿಸಿದೆ.

ಪಡುಮಾರ್ನಾಡು ಪಂಚಾಯತ್ನಲ್ಲಿ ಹಿರಿಯ ಸಹಕಾರಿ ಧುರೀಣ ದಯಾನಂದ ಪೈ, ಅಭಿನಂದನ್ ಬಲ್ಲಾಳ್ ಗೆಲುವಿನ ಸಂಭ್ರಮ,..
3 (2)

ಮೂಡುಬಿದಿರೆ ಹೋಬಳಿಯಲ್ಲಿ ಹತ್ತು ಇದ್ದ ಪಂಚಾಯತ್ಗಳು ಈಗ ಹೊಸಬೆಟ್ಟು ಮತ್ತು ಶಿರ್ತಾಡಿಯೊಳಗಿನಿಂದ ಇರುವೈಲು ಮತ್ತು ವಾಲ್ಪಾಡಿಯಿಂದಾಗಿ ಹನ್ನೆರಡಾಗಿದ್ದವು. ಈ ಪೈಕಿ
ಪುತ್ತಿಗೆ 21,ಸ್ಥಾನಗಳಲ್ಲಿ 16 ಬಿಜೆಪಿ ಬೆಂಬಲಿತರು 4 ಜೆಡಿಎಸ್, 1 ಎಸ್.ಡಿ.ಪಿ.ಐ ಬೆಂಬಲಿತರು ಗೆದ್ದಿದ್ದಾರೆ. ಇಲ್ಲಿ ಕಾಂಗ್ರೆಸ್ ಬೆಂಬಲಿತರದ್ದು ಶೂನ್ಯ ಸಾಧನೆ.
ನೆಲ್ಲಿಕಾರು 12 ಸ್ಥಾನಗಳಲ್ಲಿ 7 ಬಿಜೆಪಿ ಬೆಂಬಲಿತರು 5 ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದಾರೆ.
ಧರೆಗುಡ್ಡೆ 12 ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 6 ಸ್ಥಾನಗಳೊಂದಿಗೆ ಸಮಬಲದಲ್ಲಿದೆ
ಪಡು ಮಾರ್ನಾಡು 12 ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 9 ಸ್ಥಾನಗಳೊಂದಿಗೆ ಸಮಬಲದಲ್ಲಿದೆ
ಬೆಳುವಾಯಿ 26 ಸ್ಥಾನಗಳಲ್ಲಿ 19 ಬಿಜೆಪಿ ಬೆಂಬಲಿತರು 6 ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದಾರೆ.
ತೆಂಕ ಮಿಜಾರು 22, ಸ್ಥಾನಗಳಲ್ಲಿ 5 ಬಿಜೆಪಿ ಬೆಂಬಲಿತರು 5 ಕಾಂಗ್ರೆಸ್ ಬೆಂಬಲಿತರು 4 ಪಕ್ಷೇತರರು,1 ಸಿಪಿಐಎಂ ಗೆದ್ದಿದ್ದಾರೆ.
ಹೊಸಬೆಟ್ಟು 11 ಸ್ಥಾನಗಳಲ್ಲಿ 6 ಬಿಜೆಪಿ ಬೆಂಬಲಿತರು 5 ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದಾರೆ.
ಶಿರ್ತಾಡಿ 15 ಸ್ಥಾನಗಳಲ್ಲಿ 8 ಬಿಜೆಪಿ ಬೆಂಬಲಿತರು 6 ಕಾಂಗ್ರೆಸ್ 1 ಪಕ್ಷೇತರ ಬೆಂಬಲಿತರು ಗೆದ್ದಿದ್ದಾರೆ.
ಇರುವೈಲು 15 ಸ್ಥಾನಗಳಲ್ಲಿ 14 ಬಿಜೆಪಿ ಬೆಂಬಲಿತರು 1 ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದಾರೆ.
ವಾಲ್ಪಾಡಿ 9 ಸ್ಥಾನಗಳಲ್ಲಿ 4 ಬಿಜೆಪಿ ಬೆಂಬಲಿತರು 5 ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದಾರೆ.
ಪಾಲಡ್ಕದಲ್ಲಿನ 16 ಸ್ಥಾನಗಳಲ್ಲಿ 7 ಬಿಜೆಪಿ ಬೆಂಬಲಿತರು 9 ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದಾರೆ.
ಕಲ್ಲಮುಂಡ್ಕೂರು 16 ಸ್ಥಾನಗಳಲ್ಲಿ 6 ಬಿಜೆಪಿ ಬೆಂಬಲಿತರು 7 ಕಾಂಗ್ರೆಸ್ ಬೆಂಬಲಿತರು 3 ಪಕ್ಷೇತರರು ಗೆದ್ದಿದ್ದಾರೆ.
ಹೀಗೆ ಒಟ್ಟು 193 ಸ್ಥಾನಗಳ ಪೈಕಿ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿರುವುದರಿಂದ ಚುನಾವಣೆಯಲ್ಲಿ ಅದೃಷ್ಠ ಪರೀಕ್ಷೆಗಿಳಿದಿದ್ದ 451 ಮಂದಿ ಅಭ್ಯರ್ಥಿಗಳ ಪೈಕಿ 191 ಮಂದಿ ಗೆಲುವಿನ ನಗೆ ಬೀರಿದ್ದಾರೆ.

By suddi9

Leave a Reply

Your email address will not be published. Required fields are marked *