ಮೂಡುಬಿದರೆ: ದರೆಗುಡ್ಡೆ ಗ್ರಾ.ಪಂ ವ್ಯಾಪ್ತಿಯ ಪಣಪಿಲದಲ್ಲಿ ಕೂಲಿ ಕಾರ್ಮಿಕ ಸುಂದರ ಎಂಬವರ ಮನೆಯು ಬುಧವಾರ ಬೆಳಿಗ್ಗೆ ಭಾಗಶ: ಕುಸಿದು ಬಿದ್ದಿದ್ದು ಸುಮಾರು 4 ಲಕ್ಷ ರೂವಷ್ಟು ನಷ್ಟ ಸಂಭವಿಸಿದೆ.

mbd_june3_2 (6)

mbd_june3_2 (1)

mbd_june3_2 (2)

mbd_june3_2 (5)
ಈ ಭಾಗದಲ್ಲಿ ಬುಧವಾರ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಭಾರೀ ಮಳೆಯಾಗಿದ್ದು ಮನೆಯ ಒಂದು ಭಾಗ ಕುಸಿದು ಪಕ್ಕದಲ್ಲಿರುವ ಶೌಚಾಲಯ ಮತ್ತು ಬಚ್ಚಲು ಮನೆಗೆ ಕುಸಿದು ಬಿದ್ದಿದೆ ಘಟನೆಯ ವೇಳೆ ಪತ್ನಿ ಕುಶಲ ಮಕ್ಕಳಾದ ಹರಿಣಾ ಮತ್ತು ರಾಜೇಶ್ ಮನೆಯೊಳಗಿದ್ದು ತಕ್ಷಣ ಬೇರೊಂದು ಕೋಣೆಗೆ ಓಡಿ ಹೋಗಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.
ಮನೆಯನ್ನು ಇತ್ತೀಚೆಗಷ್ಟೆ ಸುಮಾರು ಒಂದೂವರೆ ಲಕ್ಷ ರೂ ವೆಚ್ಚದಲ್ಲಿ ದುರಸ್ತಿ ಮಾಡಲಾಗಿತ್ತು ಈಗ ಮನೆಯ ಸಂಪೂರ್ಣ ಕುಸಿದು ಬೀಳುವ ಅಪಾಯವಿದೆ. ಬಿಜೆಪಿ ಮುಖಂಡರಾದ ಶಮಿತ್ರಾಜ್ ಹಾಗೂ ಬಜರಂಗದಳದ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ವಾಸ್ತವ್ಯಕ್ಕೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದರು.4
ಘಟನೆಯ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಂಜೆಯವರೆಗೆ ಯಾರೂ ಭೇಟಿ ನೀಡಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.

By suddi9

Leave a Reply

Your email address will not be published. Required fields are marked *