ದೆಹಲಿ: ಅಮೆಥಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯ ಸ್ಮೃತಿ ಇರಾನಿ ಕಣಕ್ಕಿಳಿದಿದ್ದಾರೆ. ಅಮೆಥಿಯಲ್ಲಿ ನಾನು ರಾಹುಲ್ ಗಾಂಧಿಯನ್ನು ಮಣಿಸಲು ಶ್ರಮವಹಿಸುವುದಾಗಿ ಸ್ಮೃತಿ ತಿಳಿಸಿದ್ದಾರೆ. ಮತ್ತೊಂದೆಡೆ ಸುಪ್ರೀಂಕೋರ್ಟ್ ವಕೀಲರಾದ ಅಜಯ್ ಅಗ್ರವಾಲ್ರನ್ನು ಸೋನಿಯಾಗೆ ಎದುರಾಳಿಯಾಗಿ ರಾಯ್ಬರೇಲಿಯಿಂದ ಕಣಕ್ಕಿಳಿಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬಿಜೆಪಿಯಿಂದ ರಾಯ್ಬರೇಲಿಯಲ್ಲಿ ಉಮಾ ಭಾರತಿಯವರನ್ನು ಆಖಾಡಕ್ಕಿಳಿಸುತ್ತಿದೆ ಎಂಬ ನಿರ್ಧಾರವನ್ನು ಪಕ್ಷ ತೆಗೆದುಕೊಮಡಿತ್ತು. ಆದರೆ ಅವರು ಝಾನ್ಸಿ ಕ್ಷೇತ್ರವನ್ನು ಬಿಡಲು ಆಸಕ್ತಿ ತೋರಲಿಲ್ಲ ಮತ್ತು ಎರಡು ಸ್ಥಾನಗಳಲ್ಲಿ ಆಕೆಯನ್ನು ಕಣಕ್ಕಿಳಿಸಲು ಪಕ್ಷದಲ್ಲಿ ಒಮ್ಮತದ ನಿರ್ಧಾರ ಬರಲಿಲ್ಲ. ಈ ಕಾರಣದಿಂದ ರಾಯ್ ಬರೇಲಿ ಟಿಕೆಟ್ ಅಗರ್ವಾಲ್ ಕೈಗೆ ಸಿಕ್ಕಿದೆ.
ಉನ್ನತ ನಾಯಕರಾದ ನರೇಂದ್ರ ಮೋದಿ, ಎಲ್.ಕೆ. ಆಡ್ವಾಣಿ, ರಾಜನಾಥ್ ಸಿಂಗ್ ಮತ್ತು ಅರುಣ್ ಜೇಟ್ಲಿ ಉಪಸ್ಥಿತರಿದ್ದ ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ಇರಾನಿ ಮತ್ತು ಅಗರ್ವಾಲ್ರವರ ಕುರಿತು ನಿರ್ಧಾರ ಕೈಗೊಳ್ಳಲಾಯಿತು ಎಂದು ಬಿಜೆಪಿ ಹೈಕಮಾಂಡ್ ಮೂಲಗಳು ತಿಳಿಸಿವೆ.

