ಬಂಟ್ವಾಳ: ಬಂಟ್ವಾಳ ರೋಟರಿ ಕ್ಲಬ್ಗೆ ಕಳೆದ ಸಾಲಿನ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3180ರ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಒಟ್ಟು 18 ಪ್ರಶಸ್ತಿ ಪುರಸ್ಕಾರಗಳು ದೊರೆತಿದೆ. ರೋಟರಿ ಕ್ಲಬ್ಬಿನ ಅಧ್ಯಕ್ಷರಿಗೆ ನೀಡಲಾಗುವ ‘ಉತ್ತಮ ಶ್ರೇಣಿ’ ಪುರಸ್ಕಾರವೂ ಇಲ್ಲಿನ ರೋಟರಿ ಕ್ಲಬ್ಬಿನ ಅಧ್ಯಕ್ಷ ಎನ್.ಪ್ರಕಾಶ ಕಾರಂತ ಇವರಿಗೆ ಸಂದಿದೆ.

ಮೈಸೂರಿನಲ್ಲಿ ರೋಟರಿ ಜಿಲ್ಲಾ ಗವರ್ನರ್ ಡಾ. ಭಾಸ್ಕರ್, ಮಾಜಿ ಜಿಲ್ಲಾ ಗವರ್ನರ್ ಎಸ್. ಗುರುರಾಜ್, ನಿಯೋಜಿತ ಗವರ್ನರ್ ಡಾ. ಭರತೇಶ್ ಉಪಸ್ಥಿತಿಯಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇತ್ತೀಚೆಗೆ ನಡೆದಿದ್ದು, ಒಟ್ಟು 18 ಪ್ರಶಸ್ತಿಗಳಪೈಕಿ 8 ಪ್ರಥಮ, 7 ದ್ವಿತೀಯ, 2 ತೃತೀಯ ಸ್ಥಾನ ಲಭಿಸಿದೆ.
ಈ ಪೈಕಿ ಉತ್ತಮ ಕ್ಲಬ್ ಸೇವೆ ಸಹಿತ ಹಣಕಾಸು ನಿರ್ವಹಣೆ, ಸಾಮಾಜಿಕ ಸೇವೆ, ಸಾರ್ವಜನಿಕ ಸಂಬಂಧ, ಆರೋಗ್ಯ, ಜಿಲ್ಲಾ ಅನುದಾನ, ವಯಸ್ಕರ ಶಿಕ್ಷಣ, ಸಂಚಾರ ಮಾಹಿತಿ ವಿಭಾಗದಲ್ಲಿ ಪ್ರಥಮ ಸ್ಥಾನ ಗೆದ್ದುಕೊಂಡಿದೆ.
ಮಹಿಳಾ ಸಬಲೀಕರಣ, ಮಕ್ಕಳ ಅಭಿವೃದ್ದಿ, ಹ್ಯಾಪಿ ಸ್ಕೂಲ್, ಸರ್ವತರದ ಸೇವೆ, ಪರಿಸರ, ಟೀಚರ್ಸ್ ಸಪೋರ್ಟ್ , ಸ್ನೇಹ ಮತ್ತು ಒಡನಾಟ ವಿಭಾಗದಲ್ಲಿ ದ್ವಿತೀಯ ಸ್ಥಾನ ದೊರೆತಿದೆ.
ರೋಟರಿ ಸಮುದಾಯ ದಳ, ತರಬೇತಿ ಕಾರ್ಯಕ್ರಮದಲ್ಲಿ ಕೂಡಾ ತೃತೀಯ ಸ್ಥಾನ ಗಳಿಸಿದೆ.
ಬಂಟ್ವಾಳ ರೋಟರಿ ಕ್ಲಬ್ನ ಇತಿಹಾಸದಲ್ಲಿ ಇಷ್ಟೊಂದು ಸಂಖ್ಯೆಯ ಪ್ರಶಸ್ತಿ ಇದೇ ಪ್ರಥಮ ಬಾರಿಗೆ ದೊರೆತಿದ್ದು, ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಬಂಟ್ವಾಳ ರೋಟರಿ ಕ್ಲಬ್ಬಿನ 19 ಮಂದಿ ಸದಸ್ಯರು ಪಾಲ್ಗೊಂಡಿದ್ದರು.
