ಬಂಟ್ವಾಳ : ಸಾಕಷ್ಟು ವಿವಾದಗಳನ್ನು ಸೃಷ್ಟಿ ಮಾಡಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಮೂಲಕಾರಣವಾಗಿದ್ದ ಬಿ.ಸಿ.ರೋಡ್ ನಲ್ಲಿ ನಿರ್ಮಾಣಗೊಳ್ಳುತ್ತಿದ್ದ ನೂತನ ರೈಲ್ವೇ ಮೇಲ್ಸೇತುವೆ ಸಂಚಾರ ಮುಕ್ತಗೊಂಡಿತು. ಸದ್ಯಕ್ಕೆ ಸಾರ್ವಜನಿಕರು ಟ್ರಾಪಿಕ್ ಕಿರಿಕಿರಿಯಿಂದ ಬಚಾವ್ ಆಗುತ್ತಾರಾ ಎಂದು ಮುಂದೆ ನೋಡೋಣ. ಕಾಮಗಾರಿ ಪೂರ್ಣಗೊಳ್ಳಲು ಹತ್ತು ದಿನಗಳ ಕಾಲಾವಕಾಶ ಬೇಕಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಎ.ಖಾನ್ ಇತ್ತೀಚೆಗೆ ಬೇಟಿ ನೀಡಿದ ಸಂದರ್ಬ ಹೇಳಿದ್ದರು. ಆದರೆ ಸಾಕಷ್ಟು ಟ್ರಾಪಿಕ್ ಜಾಮ್ ಸಮಸ್ಯೆಯನ್ನು ನೋಡಿ ಇವರು ಕೊನೆಗೂ ಇಂದು ಮಧ್ಯಾಹ್ನ ಸಂಚಾರಕ್ಕೆ ಮುಕ್ತಗೋಳಿಸುವಂತೆ ತಿಳಿಸಿದರು.
ರೈಲ್ವೇ ಮೇಲ್ಸೇತುವೆ ಕಾಮಗಾರಿ ಕುರಿತಂತೆ ಲೋಕೋಪಯೋಗಿ ಇಲಾಖೆ ಇಇ ಉಮೇಶ್ ಭಟ್, ರೈಲ್ವೆ ಬ್ರಿಡ್ಜ್ ನಿರ್ಮಾಣ ನಿಯಂತ್ರಕ ಎ.ಎ. ಸುಪಾರೆ, ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್, ಟ್ರಾಫಿಕ್ ಎಸ್ಐ ಚಂದ್ರಶೇಖರಯ್ಯ ಅವರೊಂದಿಗೆ ಸಮಾಲೋಚಿಸಿದ ಬಳಿಕ ಈ ತೀರ್ಮಾನಕ್ಕೆ ಬಂದರು. ಜೂನ್ ಮೊದಲ ವಾರದ ಬಳಿ ಮತ್ತೆ ವಾಹದಟ್ಟಣೆ ಹೆಚ್ಚಾಗುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಸ್ಥಳ ತನಿಖೆ ನಡೆಸಿದ ಅಧಿಕಾರಿಗಳು ಮೇಲ್ಸೇತುವೆಯನ್ನು ಶೀಘ್ರ ಸಂಚಾರ ಮುಕ್ತಗೊಳಿಸುವ ಕುರಿತಾಗಿ ಚರ್ಚಿಸಿದ್ದರು.
ರೈಲ್ವೆ ಮೇಲ್ಸೆತುವೆ ಅಂತ್ಯದ ಈಗಿರುವ ತಿರುವಿನಲ್ಲಿ ಮಂಗಳೂರು ಪಂಪ್ಬೈಲ್ನಲ್ಲಿ ಇರುವ ಮಾದರಿ ಕಿರಿದಾದ ತಾತ್ಕಾಲಿಕ ವೃತ್ತ ನಿರ್ಮಿಸುವ ಕುರಿತಾಗಿ ಹಾಗೂ ಪ್ರಸ್ತುತ ಇರುವ ಬಿ.ಸಿ.ರೋಡ್ ವೃತ್ತವನ್ನು ಸಂಪೂರ್ಣ ತೆಗೆಯುವ ಮೂಲಕ ಅಡೆತಡೆಗಳ ನಿವಾರಣೆಗೆ ಯೋಜನೆ ರೂಪಿಸುವುದಾಗಿ ಹೇಳಿದ್ದಾರೆ, ಮಂಗಳೂರಿಂದ ಬರುವ ವಾಹನಗಳು ಹೊಸ ರೈಲ್ವೆ ಮೇಲ್ಸೆತುವೆಯ ಮೂಲಕ ಬರಲಿದ್ದು ವೃತ್ತಕ್ಕೆ ಸುತ್ತು ಹೊಡೆಯದೆ ನೇರವಾಗಿ ಪುತ್ತೂರು ಕಡೆಗೆ ಮತ್ತು ಧರ್ಮಸ್ಥಳ ಕಡೆಗೆ ಹೋಗುವಂತೆ ಕ್ರಮ ರೂಪಿಸಿದೆ. ಮಂಗಳೂರಿಗೆ ಹೋಗುವ ವಾಹನಗಳು ಪ್ರಸ್ತುತ ಸಂಚರಿಸುವ ಕ್ರಮದಲ್ಲಿ ನೇರವಾಗಿ ಮುಂದೆ ಹೋಗುವಂತೆ, ಧರ್ಮಸ್ಥಳದಿಂದ ಬರುವ ವಾಹನಗಳು ಅರ್ಧ ಸುತ್ತು ಹೊಡೆದು ಮುಂದಕ್ಕೆ ಹೋಗುವಂತೆ, ಪುತ್ತೂರು ಕಡೆಯಿಂದ ಬರುವ ವಾಹನಗಳು ಧರ್ಮಸ್ಥಳ-ಬಂಟ್ವಾಳಕ್ಕೆ ಹೋಗಲು ಮುಕ್ಕಾಲು ಸುತ್ತು ಕ್ರಮಿಸುವ ಮಾದರಿಯಲ್ಲಿ ವೃತ್ತವನ್ನು ರೂಪಿಸಲು ಚರ್ಚಿಸಲಾಗಿದೆ ಎಂದವರು ತಿಳಿಸಿದರು. ಇದೇ ಸಂದರ್ಭ ವಿವಿಧ ಊರುಗಳ ಕಡೆಗೆ ಸಂಚರಿಸುವ ಮಾರ್ಗ ಸೂಚಿ ನಾಮ ಫಲಕವನ್ನು ಪ್ರಸ್ತುತ ಇರುವ ಸ್ಥಳದಿಂದ ತೆಗೆದು ರೈಲ್ವೆ ಮೇಲ್ಸೆತುವೆ ಸನಿಹಕ್ಕೆ ಹಾಕಲು ನಿರ್ಧರಿಸಲಾಗಿದೆ.
ದ.ಕ.ಜಿಲ್ಲಾ„ಕಾರಿ ಎ.ಬಿ. ಇಬ್ರಾಹಿಂ, ಜಿಲ್ಲಾ ಪೆÇಲೀಸ್ ಅ„ೀಕ್ಷಕ ಡಾ| ಶರಣಪ್ಪ ,ಲೋಕೋಪಯೋಗಿ ಎಸ್ ಇ ಕಾಂತರಾಜು ಮೇ 23ರಂದು ಸ್ಥಳಕ್ಕೆ ಭೇಟಿಯಾಗಿ ರೈಲ್ವೆ ಮೇಲ್ಸೆತುವೆ ಕಾಮಗಾರಿ ಪ್ರಗತಿ ಪರಿಶೀಲನೆ ಮಾಡಿದ್ದರು.
ಅವರ ನಿರ್ದೇಶನದಂತೆ ಮುಂದಿನ ಕೆಲಸ ಕಾರ್ಯಗಳನ್ನು ನಡೆಸಲಾಗುತ್ತದೆ ಎಂದಿದ್ದಾರೆ.
ಪ್ರಾಯೋಗಿಕ ವ್ರತ್ತ: ಬಿಸಿರೋಡಿನ ಮುಖ್ಯ ವೃತ್ತವನ್ನು ಅರ್ದ ತುಂಡು ಮಾಡಲಾಗಿದ್ದು ಸಂಚಾರಕ್ಕೆ ಯೋಗ್ಯವಾಗುವ ನಿಟ್ಟಿನಲ್ಲಿ ತೆರವುಮಾಡಲಾಗಿದೆ. ಇದೊಂದು ಪ್ರಾಯೋಗಿಕ ಕೆಲಸವಾಗಿದ್ದು ಶೀಘ್ರವೇ ಮುಂದಿನ ಕಾಮಗಾರಿಗಳನ್ನು ನಡೆಸಲಾಗುವುದೆಮದು ತಿಳಿಸಿದ್ದಾರೆ. ಇದೇ ರೀತಿ ವ್ರತ್ತವನ್ನು ಮಾಡಿದೇ ಆದಲ್ಲಿ ಇಲ್ಲಿ ಸಾಕಷ್ಟು ಅಪಘಾತಗಳು ನಡೆಯುವ ಸಂದರ್ಭ ಕೂಡಾ ಮುಂದಿನ ದಿನಗಳಲ್ಲಿ ಆಗಬಹುದು. ಇಲ್ಲಿ ಶಾಶ್ವತ ಪೋಲಿಸ್ ನಿಯೋಜನೆ ಅಥವಾ ಟ್ರಾಫಿಕ್ ಸಿಗ್ನಲ್ಗಳ ಅಳವಡಿಕೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪೂರ್ತಿಯಾಗದ ಕಾಮಗಾರಿ: ಸಾಕಷ್ಟು ಒತ್ತಡಗಳ ನಡುವೆ ಕೊನೆಗೂ ರೈಲ್ವೇ ಮೇಲ್ಸೇತುವೆ ಸಂಚಾರಕ್ಕೆ ಬಿಟ್ಟುಕೊಟ್ಟಿದ್ದಾರೆ ಆದರೆ ಇನ್ನೂ ಕೂಡಾ ಸರಿಯಾಗಿ ಕಾಮಗಾರಿ ಪೂತಿಯಾಗಿಲ್ಲ. ಅರ್ದ ಕೆಲಸಗಳು ಬಾಕಿ ಉಳಿದಿದು ಅದನ್ನು ಯಾವಾಗ ಮಾಡುತ್ತಾರೆ ಎನ್ನುವುದು ಇನ್ನಷ್ಟೆ ತಿಳಿಯಬೇಕಾಗಿದೆ. ಮಳೆಗಾಲ ಆರಂಭವಾಗುವ ಮುನ್ನ ಕಾಮಗಾರಿ ಮುಗಿಸದಿದ್ದರೆ ಇನ್ನಷ್ಟು ಸಮಸ್ಯೆ ಇಲ್ಲಿ ಉದ್ಬವಾಗುವ ಸ್ಥಿತಿ ಇದೆ ಎಮದು ಹೇಳಲಾಗುತ್ತಿದೆ. ರಸ್ತೆ ಬದಿಯಲ್ಲಿ ಹಾಕಲಾದ ಮಣ್ಣು ಇನ್ನೂ ಕೂಡಾ ಅಲ್ಲೇ ಇದೇ ಮಳೆ ಬಂದರೆ ರಸ್ತೆಯೆಲ್ಲಾ ಕೆಸರುಮಯವಾಗುತ್ತದೆ ಮತ್ತು ಸಂಚಾರಕ್ಕೆ ಅಡ್ಡಿಯಾಗುತ್ತದೆ. ಇನ್ನೊಂದಡೆ ರಸ್ತೆ ಬದಿಗಳಲ್ಲಿ ಮಣ್ಣು ಹಾಕಿದ್ದಾರೆ ಆದರೆ ತಡೆ ಗೋಡೆ ನಿರ್ಮಿಸಿಲ್ಲ . ಅದು ಅಪಾಯವನ್ನು ಅಹ್ವಾನಿಸುತ್ತಿದೆ. ವಾಹನ ಚಾಲಕರು ಸ್ವಲ್ಪ ಎಡವಿದರೂ ಜಾರಿ ಪ್ರಪಾತಕ್ಕೆ ಬೀಳುವ ಸಂಭವವೇ ಹೆಚ್ಚು ಹಾಗಾಗಿ ಕೆಲಸವನ್ನು ಮಳೆಗಾಲ ಆರಂಭವಾಗುವ ಮುನ್ನ ಪೂರ್ತಿ ಮಾಡಿದರೆ ಮಾತ್ರ ತಾತ್ಕಲಿಕವಾಗಿಯಾದರೂ ಸಮಸ್ಯೆಯಿಂದ ಇಲಲಿನ ಜನತೆಗೆ ಮುಕ್ತಿ ಸಿಗಬಹುದು.










