ಬಂಟ್ವಾಳ: ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಬಿ.ಸಿ.ರೋಡು ವಲಯದ ವತಿಯಿಂದ “ಉಜ್ವಲ ಭವಿಷ್ಯಕ್ಕಾಗಿ ಒಂದಾಗೋಣ” ಎಂಬ ಶೀರ್ಷಿಕೆ ಅಡಿಯಲ್ಲಿ ಜರಗುವ “ಜನ ಸಂಗಮ 2015” ಈ ಅಭಿಯಾನದ ಅಂಗವಾಗಿ ಪುರುಷರಿಗಾಗಿ ಕ್ರೀಡಾಕೂಟವು ಕ್ಯೆಕಂಬ ಎಸ್.ಎಮ್. ಕ್ರೀಡಾಂಗಣದಲ್ಲಿ ನಡೆಯಿತು.

ಈ ಕ್ರೀಡಾಕೂಟವನ್ನು ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲು ಇದರ ಕಾರ್ಯದರ್ಶಿಯಾದ ಯೂಸುಪ್ ಶಬಾನ ಉಧ್ಘಾಟನೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಪರ್ಲಿಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಘಟನಾ ಪ್ರಮುಖರಾದ ಇಕ್ಬಾಲ್ ಮದ್ದ, ಇಸಾಕ್ ಅದ್ದೇಡಿ, ನಾಸಿರ್ ತುಂಬೆ, ರಿಯಾಝ್ ಮದ್ದ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಫಿ ಎಮ್.ಆರ್ ಸ್ವಾಗತಿಸಿದರು. ಅನ್ವರ್ ಎಸ್.ಎಚ್ ವಂದಿಸಿದರು, ಅಕ್ಬರಾಲಿ ಪರ್ಲಿಯ ನಿರೂಪಿಸಿದರು.
