ಬಂಟ್ವಾಳ : ಮಾಣಿ ವಿಶ್ವಕರ್ಮ ಸಮುದಾಯ ಭವನದಲ್ಲಿ ಮೇ.31ರಂದು ಅಪರಾಹ್ನ ಗುರುದಕ್ಷಿಣೆ ಮತ್ತು ಮಾಗದ ವಧೆ ಯಕ್ಷಗಾನ ತಾಳಮದ್ದಳೆ ಕೂಟ ಜರಗಲಿದೆ ಎಂದು ಸಂಯೋಜಕ ರಾಮಚಂದ್ರ ಆಚಾರ್ಯ ಮಾಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹಿಮ್ಮೇಳದಲ್ಲಿ ಭಾಗವತರಾಗಿ ಪದ್ಯಾಣ ಗಣಪತಿ ಭಟ್ ಮತ್ತು ಭವ್ಯಶ್ರೀ ಮಂಡೆಕೋಲು ಹಾಗೂ ಮುಮ್ಮೇಳದಲ್ಲಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ , ಸುಣ್ಣಂಬಳ ವಿಶ್ವೇಶ್ವರ ಭಟ್, ಜಬ್ಬಾರ್ ಸಮೋ ಸಂಪಾಜೆ, ವಾಸುದೇವ ರಂಗಭಟ್, ಗೋಪಾಲ ಶೆಟ್ಟಿ ಕಳೆಂಜ, ರಾಧಾಕೃಷ್ಣ ಕಲ್ಚಾರ್, ಸತೀಶ ಆಚಾರ್ಯ, ಹರೀಶ ಬೊಳಂತಿಮೊಗರು ಭಾಗವಹಿಸಲಿದ್ದಾರೆ.
