ಬಂಟ್ವಾಳ : ಶನಿವಾರ ರಾತ್ರಿ ಸುರಿದ ಮಳೆಗೆ ಬಂಟ್ವಾಳ ತಾಲೂಕಿನ ಕೊಯಿಲ ದ.ಕ.ಜಿ.ಪಂ.ಹಿ.ಪ್ರಾ.ಶಾಲಾ ಆವರಣ ಗೋಡೆ ಭಾಗಶ: ಕುಸಿದಿದೆ. ಮಧ್ವ ಜನತಾ ಕಾಲೊನಿಯ ಮನೆಯೊಂದಕ್ಕೆ ಸಿಡಿಲು ಬಡಿದು ಹಾನಿ ಸಂಭವಿಸಿದೆ.

koyeela
ಶಾಲೆಯು ಎತ್ತರ ಪ್ರದೇಶದಲ್ಲಿದ್ದು ರಸ್ತೆ ಭಾಗದಲ್ಲಿ ಕಪ್ಪುಕಲ್ಲಿನಲ್ಲಿ ಪಂಚಾಂಗ ಹಾಕಿ ಮೇಲ್ಭಾಗದಲ್ಲಿ ಆವರಣ ಗೋಡೆ ನಿರ್ಮಿಸಲಾಗಿತ್ತು.ಮಳೆಯ ನೀರು ಹರಿದು ಆವರಣ ಗೋಡೆ ಕಪ್ಪು ಕಲ್ಲಿನಲ್ಲಿ ಕಟ್ಟಿದ ಪಂಚಾಂಗ ಸಹಿತ ಕುಸಿದಿದೆ.ಇತ್ತೀಚೆಗೆ ನಡೆದ ಶಾಲಾ ಶತಮಾನೋತ್ಸವ ಸಂದರ್ಭದಲ್ಲಿ ಶಾಲಾ ಆವರಣ ಗೋಡೆ ನಿರ್ಮಿಸಿ ಸುಂದರಗೊಳಿಸಲಾಗಿತ್ತು.ಒಂದು ಭಾಗದಲ್ಲಿ ರಂಗಮಂದಿರವಿದ್ದು ಅಡಿಭಾಗದಲ್ಲಿ ಅಂಗನವಾಡಿ ಕೇಂದ್ರವಿದೆ. ಮಣ್ಣು ಕುಸಿತದಿಂದ ಇನ್ನಷ್ಟು ಭಾಗ ಕುಸಿಯುವ ಸಾಧ್ಯತೆ ಇದೆ.ಕುಸಿತದಿಂದ ಸುಮಾರು 50 ಸಾವಿರ ರೂ.ನಷ್ಟವೆಂದು ಅಂದಾಜಿಸಲಾಗಿದೆ.ಶಾಲಾಭಿವೃದ್ಧಿ ಸಮಿತಿಯಿಂದ ಕಂದಾಯ ಇಲಾಖೆಗೆ ಮಾಹಿತಿ ನೀಡಲಾಗಿದೆ.
ಸಿಡಿಲು ಬಡಿದು ಹಾನಿ:ತಾಲೂಕಿನ ಕಾವಳಪಡೂರು ಗ್ರಾಮದ ಮಧ್ವ ಜನತಾ ಕಾಲೊನಿಯ ಜೈನಾಭಿ ಎಂಬವರ ಮನೆಗೆ ಶನಿವಾರ ಸಿಡಿಲು ಬಡಿದು ಹಾನಿ ಸಂಭವಿಸಿದೆ.
ಸಿಡಿಲಿನ ಹೊಡೆತಕ್ಕೆ ವಿದ್ಯುತ್ ಸಂಪರ್ಕ ಸಂಪೂರ್ಣ ಸುಟ್ಟು ಹೋಗಿದೆ.ಫ್ಯಾನ್,ಟಿ.ವಿ.ಗಳು ಹಾನಿಗೊಂಡಿವೆ.ಆದರೆ ಯಾರಿಗೂ ಅಪಾಯವಾಗಿಲ್ಲ.ಕಂದಾಯ ಮತ್ತು ಮೆಸ್ಕಾಂ ಅ„ಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.ಸುಮಾರು 50 ಸಾವಿರ ನಷ್ಟವಾಗಿದೆಯೆಂದು ಆಂದಾಜಿಸಲಾಗಿದೆ.

By suddi9

Leave a Reply

Your email address will not be published. Required fields are marked *