ವಾಣಿಜ್ಯ ಶೇ.100, ವಿಜ್ಞಾನ ಶೇ.97
ಮೂಡುಬಿದರೆ: ಪಿಯುಸಿ ಪರೀಕ್ಷೆಯಲ್ಲಿ ಕಲ್ಲಬೆಟ್ಟು ಎಕ್ಸಲೆಂಟ್ ಕಾಲೇಜಿನ 271 ವಿದ್ಯಾರ್ಥಿಗಳು ಹಾಜರಾಗಿದ್ದು 263 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 98 ಫಲಿತಾಂಶ ಲಭಿಸಿದೆ. ವಿಜ್ಞಾನ ವಿಭಾಗದ ಅದನ್ನವಾರ್ ಮಲ್ಲಿಕಾರ್ಜುನ್ ಶೇಖರ್ 580 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 223ರಲ್ಲಿ 215 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 97ಫಲಿತಾಂಶ ಮತ್ತು ವಾಣಿಜ್ಯ ವಿಭಾಗದಲ್ಲಿ 48 ವಿದ್ಯಾರ್ಥಿಗಳಲ್ಲಿ 48 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 100 ಫಲಿತಾಂಶ ದಾಖಲಾಗಿದೆ.
ಪರೀಕ್ಷೆಗೆ ಹಾಜರಾಗಿದ್ದ 271 ವಿದ್ಯಾರ್ಥಿಗಳಲ್ಲಿ 121 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 139 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇಂಗ್ಲೀಷ್, ಕನ್ನಡ, ಹಿಂದಿ, ಸಂಸ್ಕøತ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಕಯಂತ್ರಶಾಸ್ತ್ರ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರಗಳಲ್ಲಿ ಶೇ 100 ಫಲಿತಾಂಶ ಲಭಿಸಿದೆ. ಗಣಿತಶಾಸ್ತ್ರದಲ್ಲಿ 12 ವಿದ್ಯಾರ್ಥಿಗಳು, ಗಣಕವಿಜ್ಞಾನ, ವ್ಯವಹಾರ ಅಧ್ಯಯನದಲ್ಲಿ ಒಟ್ಟು 10 ವಿದ್ಯಾರ್ಥಿಗಳು, ಲೆಕ್ಕಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರದಲ್ಲಿ ಒಟ್ಟು ಮೂರು ವಿದ್ಯಾರ್ಥಿಗಳು 100 ಅಂಕವನ್ನು ಪಡೆಯುವ ಮೂಲಕ ಉತ್ತಮ ಫಲಿತಾಂಶ ದಾಖಲಾಗಿದೆ.

mbd_may18_5 (malikarjuna)
ಸಾಧಕ ವಿದ್ಯಾರ್ಥಿಗಳು:
ವಿಜ್ಞಾನ ವಿಭಾಗ
ಆತಿರಾ ಜಿ,ಮೆನನ್ (ಪಿ.ಸಿ.ಎಂ.ಬಿ) 572 ಅಂಕಗಳು ಶೇ 95.33
ಕೌಶಲ್ ಎಂ.ಟಿ (ಪಿ.ಸಿ.ಎಂ.ಬಿ) 571 ಅಂಕಗಳು ಶೇ 95.17
ಅದನ್ನವಾರ್ ಮಲ್ಲಿಕಾರ್ಜುನ್ ಶೇಖರ್ (ಪಿ.ಸಿ.ಎಂ.ಸಿ) 580 ಅಂಕಗಳು ಶೇ 96.67
ಗೋವಿಂದ್ ಎನ್.ವಿ (ಪಿ.ಸಿ.ಎಂ.ಸಿ) 578 ಅಂಕಗಳು ಶೇ 96.3
ವಾಣಿಜ್ಯ ವಿಭಾಗದ
ಬಸವರಾಜ್ ಚಿಂಚಳ್ಳಿ 572 ಅಂಕಗಳು ಶೇ 95.33
ಲಾವಣ್ಯ ಕೆ.ಎಸ್ 572ಅಂಕಗಳು ಶೇ 95.33
ಪ್ರಾರ್ಥನಾ ಎನ್.ವಿ 568 ಅಂಕಗಳು ಶೇ 94.67

By Suddi9

Leave a Reply

Your email address will not be published. Required fields are marked *