ಮೂಲ್ಕಿ:ಮುಲ್ಕಿ ಸಮೀಪದ ಪಾವಂಜೆ ಸೇತುವೆ ಬಳಿ ಭಿಕ್ಷುಕನೊಬ್ಬ ವಾಹನದ ಅಡಿಗೆ ಬಿದ್ದು ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಸುಮಾರು 50 ವರ್ಷ ಇರಬಹುದೆಂದು ನಂಬಲಾಗಿದೆ. ಮೃತಪಟ್ಟ ವ್ಯಕ್ತಿಯ ಮೈಮೇಲೆ ಯಾವುದೇ ಬಟ್ಟೆಯಿಲ್ಲದೇ ಇದ್ದುದರಿಂದ ಬಿಕ್ಷುಕನಿರಬಹುದೆಂದು ಸಂಕಿಸಲಾಗಿದೆ. ಶನಿವಾರ ಮುಂಜಾನೆ ಯಾವುದೋ ವಾಹನವು ಡಿಕ್ಕಿ ಹೊಡೆದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.ವಾಹನ ಪರಾರಿಯಾಗಿದೆ ಸ್ಥಳಕ್ಕೆ ಸುರತ್ಕಲ್ ಠಾಣಾ ಪೊಲೀಸರು ಭೇಟಿ ನೀಡಿದ್ದು ಮೃತದೇಹವನ್ನು ನಗರದ ವೆನ್‍ಲಾಕ್ ಶವಾಗಾರಕ್ಕೆ ಸಾಗಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *