ಬಂಟ್ವಾಳ : ಚೆಕ್ ಅಮಾನ್ಯ ಪ್ರಕರಣವೊಂದರಲ್ಲಿ ಆರೋಪಿಯನ್ನು ಬಂದಿಸಲಾಗಿದ್ದು ನ್ಯಾಯಾಲಯದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಘಟನೆ ಸೋಮವಾರ ಸಂಭವಿಸಿದೆ.

ಬಂಟ್ವಾಳ ತಾಲೂಕು ಎಡ್ತೂರು ಪದವಿನ ನಯಸೇನಮಲ್ಲ ಎಂಬಾತ ಭೂ ವ್ಯವಹಾರದಲ್ಲಿ ಮನೋಜ್ ಎಂಬವರಿಗೆ 13 ಲಕ್ಷ ರೂ. ಮೊತ್ತದ ಚೆಕ್ ನೀಡಿದ್ದು ಪಾವತಿಯಾಗಿರಲಿಲ್ಲ . ಈ ಬಗ್ಗೆ ಮನೋಜ್ ಅವರು ದಾವೆ ಸಲ್ಲಿಸಿದ್ದರು. ಪ್ರಕರಣವನ್ನು ಪರಿಶೀಲಿಸಿದ ನ್ಯಾಯಾಲಯ ಹಣ ಪಾವತಿಸಲು ಕಾಲಾವಕಾಶ ನೀಡಿತ್ತು. ಆದರೆ ಆರೋಪಿ ನಿಗದಿತ ಸಮಯದಲ್ಲಿ ಹಣ ಪಾವತಿಸಿರಲಿಲ್ಲ. ನ್ಯಾಯಾಲಯದ ವಾರಂಟಿನನ್ವಯ ಪೊಲೀಸರು ಆರೋಪಿಯನ್ನು ಬಂದಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ 2 ದಿನಗಳಲ್ಲಿ ಹಣ ಪಾವತಿಸಲು ಸೂಚಿಸಿದೆ. ತಪ್ಪಿದಲ್ಲ್ಲಿ ಜೈಲು ಶಿಕ್ಷೆಯನ್ನು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.
