ಬಂಟ್ವಾಳ: ಮುಲಾರ್ ಪಟ್ನ ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ಮಾಡಿದ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಸುಮಾರು 30ಕ್ಕೂ ಹೆಚ್ಚು ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮುಲಾರ್ ಪಟ್ನ ಪಲ್ಗುಣಿ ನದಿಯ ತಟದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದಾರೆ ಎಂದು ದೂರಿನ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ಪುರದಂರ ಹೆಗ್ಡೆ ನೇತೃತ್ವದ ತಂಡ ದಾಳಿ ನಡೆಸಿತ್ತು. ಮುಲಾರ್ ಪಟ್ನ ನದಿಯ ಒಂದು ಭಾಗದವರೆಗೆ ಮಾತ್ರ ಬಂಟ್ವಾಳ ತಾಲೂಕಿಗೆ ಸೇರುತ್ತದೆ, ಉಳಿದ ಭಾಗ ಮಂಗಳೂರು ಬಜ್ಪೆ ಠಾಣಾ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಎರಡು ತಾಲೂಕಿನ ಗಡಿ ಪ್ರದೇಶದ ವಿವಾದವಾದರಿಂದ ಇಷ್ಟು ಸಮಯ ಮುಂದೂಡಲಾಗಿತ್ತು ಎಂದು ಹೇಳಲಾಗಿತ್ತು. ಆದರೆ ವಾಸ್ತವವಾಗಿ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಉನ್ನತ ಪೋಲಿಸ್ ಅಧಿಕಾರಿಗಳನ್ನು ಮತ್ತು ಗಣಿ ಇಲಾಖೆಯ ಅಧಿಕಾರಿಗಳನನು ಬುಟ್ಟಿಯೊಳಗೆ ಹಾಕಿಕೊಂಡು ಈ ದಂಧೆ ನಡಸಲಾಗುತ್ತಿದೆ ಎಂದು ಹೇಳುತ್ತಿದಾರೆ. ಇಂದು ನೆಡದ ದಾಳಿಯ ಸಂದರ್ಭ ಅಧಿಕಾರಿಗಳ ಎದುರಲ್ಲೇ ಜೆ.ಸಿ.ಬಿ.ಬಳಸಿ ಮರಳು ತೆಗೆಯುತ್ತಿದ್ದರು ಎಂದು ಸಾರ್ವಜನಿಕರು ಆರೋಪ ವ್ಯಕ್ತಪಡಿಸಿದ್ದಾರೆ. ಎಷ್ಟು ಲಾರಿಗಳನನು ವಶಕ್ಕೆ ಪಡೆಯಲಾಗಿದೆ ಮತ್ತು ಎಷ್ಟು ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿಯನ್ನು ತಹಶೀಲ್ದಾರ್ ಕೇಳಿದರೆ ನೀಡುತ್ತಿಲ್ಲ. ಹಾಗದರೆ ಇವರು ಕೂಡಾ ಮರಳು ದಂಧೆಯ ವರೊಂದಿಗೆ ಕೈ ಜೊಡಿಸಿದ್ದಾರ ಎನ್ನುವ ಸಂಶಯ ಇಲ್ಲಿನ ಜನರಲ್ಲಿ ಇದೆ. ಮರಳು ಗಾರಿಕೆಯ ಬಗ್ಗೆ ಅಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಿದರೆ ಮರಳು ತೆಗೆಯಲಿ ನಿಮಗೇನು ಎಂದು ದರ್ಪದ ಉತ್ತರ ಕೊಡುತ್ತಾರೆ ಎಂದು ಹೇಳುತ್ತಿದ್ದಾರೆ. ಈ ರಸ್ತೆಯಲ್ಲಿ ಇತರ ವಾಹನಗಳಿಗೆ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಮರಳು ವಾಹನ ಚಾಲಕರು ಇತರ ವಾಹನ ಚಾಲಕರಿಗೆ ಕಿರಿಕಿರಿ ಮಾಡುತ್ತಾರೆ ಎನ್ನಲಾಗಿದೆ. ಕೇವಲ ಅಮಾಯಕ ಲಾರಿ ಚಾಲರನ್ನು ಮರಳು ಕೆಲಸಗಾರರನ್ನು ಅಧಿಖಾರಿಗಳು ವಶಕ್ಕೆ ಪಡೆದು ಕೇಸು ದಾಖಲಿಸುತ್ತಾರೆ ಆದರೆ ಪ್ರಮುಖ ಆರೋಪಿಗಳನ್ನು ಅಧಿಖಾರಿಗಳು ಬಚಾವ್ ಮಾಡುತ್ತಿದ್ದಾರೆ. ಎಲ್ಲಾ ಅಕ್ರಮ ಕೆಲಸಗಳು ಅಧಿಕಾರಿಗಳ ಒಳೊಪ್ಪಂದದಲ್ಲಿ ನಡೆಯುತ್ತಿದೆ ಎಂದು ಆರೋಪವ್ಯಕ್ತ ಪಡಿಸುತ್ತಿದ್ದಾರೆ. ನೇತ್ರಾವತಿ ನದಿಯ ಉದ್ದಗಲಕ್ಕೂ ಅಕ್ರಮ ಮರಳುಕಾರಿಕೆ ನಡೆಯುತ್ತಿದ್ದರೂ ಜಿಲ್ಲಾಡಳಿತ ಮೌನವಾಗಿದೆ. ಅದೆಲ್ಲವನ್ನು ಬದಿಗಿರಿಸಿ ಮುಲಾರ್ ಪಟ್ನ ದ ಮರಳು ಅಡ್ಡೆಗೆ ದಾಲಿ ಮಾಡಿದ ಅಧಿಕಾರಿಗಳು ನಿಖರವಾದ ಮಾಹಿತಿ ನೀಡಲು ಇಲ್ಲೂ ಹಿಂದೇಟು ಹಾಕುತ್ತಿದ್ದಾರೆ ಯಾಕೆ? ಹಾಗಾದರೆ ದಾಲಿ ಮಾಡಿದ ಕೂಡಲೇ ಇವರಿಗೆ ಲಾರಿಗಳನ್ನು ಬಿಡುವಂತೆ ಒತ್ತಡ ಬಂದಿದಾ? ಅಥವಾ ಈ ಹಿಂದೆ ನಡೆಸಿದ ದಾಲಿಯ ರೂಪವನನು ಇದು ಪಡೆಯುತ್ತಾ? ಕೇವಲ ನಾಟಕೀಯ ದಾಳಿ ನಡೆದು ಮತ್ತೆ ಅದೇ ನಿರಂತರ ಮುಂದುವರಿಯುತ್ತಾ ? ಎನ್ನುವ ನೂರಾರು ಪ್ರಶ್ನೆಗಳು ಸಾರ್ವಜನಿಕರದ್ದು.
