ಬಂಟ್ವಾಳ: ಈ ಸರ್ಕಾರಿ ಇಲಾಖೆ-ಯೋಜನೆಗಳ ಮಾಹಿತಿ ಇಲ್ಲಿ ಕೇವಲ ಗೋಡೆ ಅಲಂಕರಿಸುವ ಚಿತ್ರಗಳಲ್ಲ, ಬದುಕು ಅರಳಿಸುವ ಚಿತ್ತಾರಗಳಾಗಬೇಕು ಎನ್ನುವುದು ಸಚಿವ ರೈ ಆಶಯ. ಚಿತ್ರಗಳಲ್ಲಿ ಅಡಗಿರುವ ವಿವಿಧ ಸೌಲಭ್ಯಗಳ ಬಗ್ಗೆ ನಿಮಗೇನಾದ್ರೂ ಡೌಟ್ ಬಂದ್ರೆ ಅದಕ್ಕೂ ಇಲ್ಲಿ ಫುಲ್ ಡೀಟೇಲ್ಸ್ ಇದೆ. ಕಾರ್ಯದರ್ಶಿ ಚಂದ್ರಶೇಖರ ಪಾತೂರು ಇದಕ್ಕೊಂದು ಸರಳ ಸೂತ್ರ ಸಿದ್ದಪಡಿಸಿದ್ದು, ಸರ್ಕಾರದ ಎಲ್ಲಾ ಇಲಾಖೆಗಳ ವಿವಿಧ ಯೋಜನೆಗಳ ಮಾಹಿತಿ ಇರುವ ಕೈಪಿಡಿಯೊಂದನ್ನು ಸಿದ್ದಪಡಿಸಿದ್ದಾರೆ. ಚಿತ್ರ-ಚಿತ್ತಾರ ನೋಡಿ ಯಾರಾದರೂ ಮಾಹಿತಿ ಕೇಳಿದ್ರೆ, ಅವರಿಗೆ ಕೈಪಿಡಿ ಕೊಟ್ಟು ಫುಲ್ ಡೀಟೆಲ್ಸ್ ಒದಗಿಸಲು ಇಲ್ಲಾ ಸಿದ್ದತೆ ಮಾಡಿಕೊಂಡಿದ್ದಾರೆ.


ಇನ್ನುಮುಂದೆ ಸಚಿವರ ಬಿ.ಸಿ.ರೋಡಿನ ಕಛೇರಿಯಲ್ಲಿ ಸಚಿವರಿಗಾಗಿ ದಿನವಿಡೀ ಕಾದು, ಕೊನೆಗೆ ದಿನ ನಷ್ಟವಾಯಿತು ಎಂದು ಶಪಿಸುವಂತಿಲ್ಲ. ಯಾಕೆಂದರೆ ಸಚಿವರ ಬಿ.ಸಿ.ರೋಡಿನ ಕಛೇರಿ ವರ್ಲಿ ಕಲಾಕೃತಿಗಳಿಂದ ಸುಂದರಗೊಳ್ಳುತ್ತಿದ್ದು, ಸರ್ಕಾರದ ಇಲಾಖೆಗಳ ಮಾಹಿತಿಗಳು, ಇಲಾಖಾ ಸೌಲಭ್ಯಗಳ ಮಾಹಿತಿಯನ್ನು ಪ್ರಚಾರಪಡಿಸಲು ವರ್ಲಿ ಚಿತ್ರ ಚಿತ್ತಾರಗಳು ರಚನೆಯಾಗುತ್ತಿವೆ.
ರೈ- ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖಾ ಸಚಿವರು, ಹಾಗಾಗಿ ಇಲ್ಲಿ ಅರಳಿರುವ ವರ್ಲಿಚಿತ್ತಾರಗಳಲ್ಲಿ ಪರಿಸರ ಕಾಳಜಿಯ ಮಾಹಿತಿಯಿದೆ, ಜೀವಸಂಕುಲಗಳ ರಕ್ಷಿಸಬೇಕೆಂಬ ಸಂದೇಶವಿದೆ. ಅನ್ನಭಾಗ್ಯ ದ ಚಿತ್ತಾರದಲ್ಲಿ ಕೇವಲ ಯೋಜನೆಯ ಪ್ರಚಾರ ಇಲ್ಲಿಲ್ಲ. ಭತ್ತ ಬೆಳೆಯುವುದರಿಂದ ತೊಡಗಿ ಭತ್ತ ಅಕ್ಕಿಯಾಗಿ ಅನ್ನವಾಗಿ, ಬಟ್ಟಲಿಗೆ ಬೀಳುವವರೆಗಿನ ವಿವಿಧ ಹಂತಗಳು, ಕೃಷಿಗೆ ಆಧಾರವಾದ ನೀರ ಮೂಲಗಳ ಕುರಿತು ಮಾಹಿತಿಗಳು ಅಡಕವಾಗಿದೆ. ಉಳಿದಂತೆ ಕ್ಷೀರಧಾರೆ, ಕ್ಷೀರಭಾಗ್ಯದ ಚಿತ್ತಾರಗಳು ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಹಾಲು, ಹೈನುಗಾರಿಕೆಗೆ ಪ್ರೋತ್ಸಾಹ ನೀಡುವುದರ ಉಲ್ಲೇಖಗಳಿವೆ. ವಿದ್ಯಾಸಿರಿಯಲ್ಲಿ ಶಿಕ್ಷಣ ಇಲಾಖೆ ಒದಗಿಸರುವ ಶಿಕ್ಷಣದ ವ್ಯವಸ್ಥೆಯ ವಿವಿಧ ಅವಕಾಶಗಳನ್ನು ಬಳ್ಳಿ ರೂಪದಲ್ಲಿ ಚಿತ್ರಿಸಲಾಗಿದೆ. ವಿದ್ಯಾರ್ಥಿವೇತನ, ಕಾನೂನು ಪದವೀಧರರಿಗೆ ಅವಕಾಶಗಳು, ನರ್ಸಿಂಗ್ ತರಬೇತಿ, ಅಂಗನವಾಡಿ ಕೇಂದ್ರಗಳ ಸೌಲಭ್ಯಗಳ ವಿವರಗಳಿವೆ. ಮಕ್ಕಳ ಸಹಾಯವಾಣಿ, ಮಹಿಳಾ ಸಹಾಯವಾಣಿ, ಹಿರಿಯನಾಗರೀಕರು, ವಿಕಲಚೇತನರ ಸೌಲಭ್ಯಗಳು, ಆರೋಗ್ಯ ಇಲಾಖೆಯ ಮಡಿಲು, ಪ್ರಸೂತಿ ಆರೈಕೆಯ ಮಾಹಿತಿಯುಳ್ಳ ಚಿತ್ತಾರಗಳು ಗಮನಸೆಳೆಯುತ್ತಿದೆ. ಉಚಿತ ಗೃಹ ನಿರ್ಮಾಣ, ವಸತಿ ಯೋಜನೆ, ಭಾಗ್ಯಜ್ಯೋತಿ, ಉಚಿತ ಬೈಸಿಕಲ್, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಸಕಾಲ ಕಾಯ್ದೆ, ಕೃಷಿ, ತೋಟಗಾರಿಕೆ,ಪಶುಪಾಲನೆ, ಪಶುವೈದ್ಯಕೀಯ ಸೇವೆ, ಕೈಮಗ್ಗ ಇಲಾಖೆ. ಮೀನುಗಾರಿಕಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯ, ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು, ಮೊರಾರ್ಜಿ ವಸತಿ ಶಾಲೆಗಳಲ್ಲಿನ ಸೌಲಭ್ಯಗಳಿಲ್ಲಿ ಚಿತ್ರಗಳ ರೂಪ ಪಡೆದಿವೆ,
ಕೇಳಿದ್ರೆ ಇಡೀ ಡೀಟೆಲ್ಸ್..!
ಒಟ್ಟಿನಲ್ಲಿ ರಾಜಕಾರಣಿಯಾಗಿ ಕಲೆ, ಸಾಹಿತ್ಯ, ಕ್ರೀಡೆ ಯ ಕುರಿತಾಗಿ ಒಲವು ಬೆಳೆಸಿಕೊಂಡಿರುವ ಸಚಿವ ಬಿ.ರಮಾನಾಥ ರೈ ಯವರು, ಸಾರ್ವಜನಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ತಮ್ಮ ಕಛೇರಿ ಗೋಡೆಗಳಲ್ಲಿ ವರ್ಲಿ ಅರಳಿಸಿರುವುದು ಅವರ ಕಲಾ ಪ್ರಜ್ಞೆಗೆ ಸಾಕ್ಷಿ.

