ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಜಂಕ್ಷನ್‍ನಿಂದ ಕಾಣೆಮಾರ್ ಸಂಪರ್ಕ ರಸ್ತೆ ತುಂಬೆ ಗ್ರಾಮಪಂಚಾಯತ್ ನ 60 ಸಾವಿರ ರುಪಾಯಿ ಅನುದಾನದಲ್ಲಿ ಅಭಿವೃದ್ದಿಗೊಳ್ಳಲಿದ್ದು ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಗುದ್ದಲಿ ಪೂಜೆ ನೆರವೇರಿಸಿದರು.

ತುಂಬೆ ಗ್ರಾಮಪಂಚಾಯತ್ ಅಧ್ಯಕ್ಷ ಮಹಮ್ಮದ್ ವಳವೂರು, ಜಿ.ಪಂ.ಉಪಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕ ಪದ್ಮನಾಭ ಕೊಟ್ಟರಿ, ತಾ.ಪಂ.ಸದಸ್ಯೆ ಅನಿತಾ ಎಂ. ಪೂಜಾರಿ, ಮಾಜಿ ಸದಸ್ಯ ಸೋಮಪ್ಪ ಕೋಟ್ಯಾನ್ ತುಂಬೆ ಪಂ. ಸದಸ್ಯ ಪ್ರವೀಣ್ ಡಿ. ತುಂಬೆ, ಪ್ರಮುಖರಾದ ಮನೋಜ್ ಆಚಾರ್ಯ ನಾಣ್ಯ, ಪ್ರವೀಣ್ ಶೆಟ್ಟಿ, ಮನೋಹರ ಶೆಟ್ಟಿ, ದಿನೆಶ್ ಶೆಟ್ಟಿ ಕೊಟ್ಟಿಂಜ, ಗಣೇಶ್ ತುಂಬೆ ಹಾಜರಿದ್ದರು.
