ಬಂಟ್ವಾಳ : ಸರಕಾರದ ಎಲ್ಲಾ ಸವಲತ್ತುಗಳು ಎಲ್ಲಾ ಸಮುದಾಯದ ಜನರಿಗೆ ಸಮಾನವಾಗಿ ಹಂಚಿಕೆಯಾಗಬೇಕೆಂಬುದು ಸಿದ್ಧರಾಮಯ್ಯ ಸರಕಾರದ ಅಭಿಲಾಷೆಯಾಗಿದ್ದು ಈ ನಿಟ್ಟಿನಲ್ಲಿ ಪ್ರತೀ ಗ್ರಾಮಗಳಿಗೆ ಭೇಟಿ ನೀಡಿ ಜನಸಾಮಾನ್ಯರಿಗೆ ಸವಲತ್ತುಗಳನ್ನು ಮುಟ್ಟಿಸುವ ಕಾರ್ಯ ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.
ಅವರು ಬಂಟ್ವಾಳ ತಾಲೂಕು ಬಡಗಕಜೆಕಾರು ಗ್ರಾ.ಪಂ.ವ್ಯಾಪ್ತಿಯ ಪಾಂಡವರಕಲ್ಲಿನಲ್ಲಿ ನಡೆದ ಗ್ರಾಮ ಭೇಟಿ ಕಾರ್ಯಕ್ರಮದಲ್ಲಿ ಹಕ್ಕುಪತ್ರ ವಿತರಿಸಿ ಮಾತನಾಡಿದರು.

94ಸಿ ರಾಜ್ಯದಲ್ಲಿ ಪ್ರಥಮ ಎಂಬಂತೆ ಬಂಟ್ವಾಳ ತಾಲೂಕಿನಲ್ಲಿ 810 ಮಂದಿಗೆ ಹಕ್ಕುಪತ್ರ ವಿತರಿಸಲಾಗಿದೆ. ಇನ್ನಷ್ಟು ಅರ್ಜಿಗಳು ಪರಿಶೀಲನೆಯಲ್ಲಿದೆ ಎಂದು ಹೇಳಿದರು.
ಗ್ರಾ.ಪಂ.ಅಧ್ಯಕ್ಷೆ ವಸಂತಿ, ಕಾವಳಮೂಡೂರು ಗ್ರಾ.ಪಂ.ಅಧ್ಯಕ್ಷ ಯಾಕೂಬ್ ಸಾಹೇಬ್, ತಾ.ಪಂ.ಸದಸ್ಯರಾದ ಬಿ.ಪದ್ಮಶೇಖರ ಜೈನ್, ಬಂಟ್ವಾಳ ನಗರಾಭಿವೃದ್ಧಿ ಪ್ರಾ„ಕಾರ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ತಹಶೀಲ್ದಾರ್ ಪುರಂದರ ಹೆಗ್ಡೆ , ಶ್ರೀ ಕ್ಷೇತ್ರ ಕಾರಿಂಜ ಮಾಜಿ ಅಡಳಿತ ಮೊಕ್ತೇಸರ ಪಿ.ಜಿನರಾಜ ಆರಿಗ, ತಾ.ಪಂ.ಮಾಜಿ ಅಧ್ಯಕ್ಷ ಸತೀಶ್ಚಂದ್ರ ಕೆ.ಎ., ಸಿ.ಎ.ಮಾಜಿ ಅಧ್ಯಕ್ಷ ಡೀಕಯ ಬಂಗೇರ, ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ್ಲ , ಸದಸ್ಯರಾದ ಜಯ ಬಂಗೇರ, ವೀರೇಂದ್ರ ಕುಮಾರ್ ಜೈನ್, ಶೋಭಾ, ವಿನೋದ, ಜಾನ್ಸೇರಾ, ವಾರಿಜ, ಪಂ.ಅ.ಅ„ಕಾರಿ ಪ್ರಭಾಕರ, ಕಾರ್ಯದರ್ಶಿ ಮೋನಮ್ಮ , ಎಂಜಿನಿಯರ್ ಕೃಷ್ಣ , ಪ್ರಮುಖರಾದ ದಿವಾಕರ ಪೂಜಾರಿ, ಸುರೇಶ್ ಬಾರ್ದೊಟ್ಟು , ಆನಂದ ಪೂಜಾರಿ ಕರ್ಲ ಮತ್ತಿರರು ಉಪಸ್ಥಿತರಿದ್ದರು.
