ಮೂಡುಬಿದಿರೆ : ಇಲ್ಲಿನ ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ವತಿಯಿಂದ “ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಸುಧಾರಿತ ಸಂಶೋಧನೆಗಳು” ಎಂಬ ವಿಷಯದ ಕುರಿತು ಮಿಜಾರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆಯುವ ರಾಷ್ಟ್ರೀಯ ತಾಂತ್ರಿಕ ಸಮಾವೇಶ “ಎನ್‍ಸಿಎಐಇಟಿ-2015” ಶುಕ್ರವಾರ ಆರಂಭಗೊಂಡಿತು.
24 mood alvas samavesha (2)

24 mood alvas samavesha (1)

ಬೆಂಗಳೂರು ಟಿಸಿಎಸ್‍ನ ಹಿರಿಯ ವಿಜ್ಞಾನಿ ಡಾ.ಎಂ.ಗಿರೀಶ್‍ಚಂದ್ರ ಮುಖ್ಯ ಅತಿಥಿಯಾಗಿ ಭಾಗವಹಿಸಿ ರಾಷ್ಟ್ರೀಯ ತಾಂತ್ರಿಕ ಸಮಾವೇಶವನ್ನು ಉದ್ಘಾಟಿಸಿ ಸಮಾಜಕ್ಕೆ ವಿಜ್ಞಾನದ ಪ್ರಯೋಗ ಗರಿಷ್ಠ ಪ್ರಮಾಣದಲ್ಲಿ ಸಿಗಬೇಕಾದಾಗ ಆಯಾ ಕ್ಷೇತ್ರದಲ್ಲಿ ಸಂಶೋಧನೆಗಳು ನಡೆಯಬೇಕು. ಹೀಗೆ ಸಂಶೋಧನೆ ಮಾಡುವವರು ಮೂಲ ಸಂಗತಿಗಳನ್ನು ಚೆನ್ನಾಗಿ ಅಧ್ಯಯನ ಮಾಡಿ ತಿಳಿದುಕೊಳ್ಳಬೇಕು ಎಂದು ಹೇಳಿದ ಅವರು ಇಂತಹ ಸಂಶೋಧನೆಗಳಿಗೆ ಹೆಚ್ಚು ವ್ಯಯಿಸಬೇಕಾದುದು ಅಗತ್ಯ ಎಂದರು.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಪೀಟರ್ ಫೆರ್ನಾಂಡಿಸ್ ಅಧ್ಯಕ್ಷತೆಯನ್ನು ವಹಿಸಿ ಯಾವುದೇ ವಿಷಯದ ಬಗ್ಗೆ ಬೋಧಿಸಲು ಧೈರ್ಯ ಪಡುವವರು ಕಲಿಯುವುದನ್ನು ನಿಲ್ಲಿಸಬಾರದು. ಕಲಿಕೆ ಅನ್ನುವುದು ನಿರಂತರವಾಗಿರಬೇಕು ಎಂದು ಹೇಳಿದರು.

ಕಾಲೇಜಿನ ಡೀನ್ ಕಿಶೋರ್‍ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಸಂಯೋಜಕರಾದ ಪ್ರೊ.ರಾಫವೇಂದ್ರ ರಾವ್ (ಕಾಲೇಜಿನ ಇಸಿಇ ವಿಭಾಗದ ಮುಖ್ಯಸ್ಥ) ಸ್ವಾಗತಿಸಿದರು. ಪ್ರೊ. ಮಂಜುನಾಥ ಕೊಟ್ಟಾರಿ (ಸಿಎಸ್‍ಇ ವಿಭಾಗದ ಮುಖ್ಯಸ್ಥ) ಡಾ.ಗಿರೀಶ್‍ಚಂದ್ರ ಅವರನ್ನು ಪರಿಚಯಿಸಿದರು. ಶೃತಿ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಪ್ರವೀಣ್ ಜೆ. ವಂದಿಸಿದರು.

By suddi9

Leave a Reply

Your email address will not be published. Required fields are marked *