ಮೂಡುಬಿದರೆ : ಇಲ್ಲಿನ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ದೇವರ ಮನೆ ಜಾಗ ಖರೀದಿ ಸಮಿತಿಯ ವತಿಯಿಂದ ಕ್ಷೇತ್ರದ ಬಳಿ ಖರೀದಿಸಿದ ದೇವರ ಮನೆ ಜಾಗದಲ್ಲಿ ಭೂ ಸಮರ್ಪಣೆಯ ಅಂಗವಾಗಿ ಭೂ ವರಾಹ ಯಜ್ಞ ಹಾಗೂ ನೂತನ ಕಲ್ಯಾಣ ಮಂಟಪದ ಭೂಮಿ ಪೂಜೆಯು ನಡೆಯಲಿದೆ.

ಅಂದು ಬೆಳಿಗ್ಗೆ 9.15ಕ್ಕೆ ಭೂ ವರಾಹ ಯಜ್ಞದ ಪೂರ್ಣಾಹುತಿ ಹಾಗೂ 10.23ಕ್ಕೆ ನೂತನ ಕಲ್ಯಾಣ ಮಂಟಪದ ಭೂಮಿ ಪೂಜೆ ನಡೆಯಲಿದೆ. ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಭೂ ದಾನ ನೀಡಿದ ದಾನಿಗಳನ್ನು ಭೂದಾನ ಪತ್ರ ನೀಡಿ ಗೌರವಿಸಲಾಗುವುದು. ಶ್ರೀಮತ್ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠ ಬೆಳಗುತ್ತಿ ಮಠದ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಿಲಿದ್ದು ಕ್ಷೇತ್ರದ ಆಡಳಿತ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಯುವಸಬಲೀಕರಣ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್‍ನ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವಾ, ಮಾಜಿ ಸಚಿವರಾದ ಅಮರನಾಥ ಶೆಟ್ಟಿ, ಕೃಷ್ಣ ಜೆ. ಪಾಲೇಮಾರ್, ಪುರಸಭಾಧ್ಯಕ್ಷೆ ಸುಪ್ರಿಯಾ ಡಿ ಶೆಟ್ಟಿ, ಮೂಡುಬಿದಿರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುರೇಶ್ ಕೋಟ್ಯಾನ್, ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್, ಕಾರ್ಕಳ ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ಕೆ. ಸತೀಶ್ ಆಚಾರ್ಯ, ಮುಂಬೈ ಗೋಕುಲಾನಂದ ಹೋಟೆಲ್ ಪ್ರೈ.ಲಿ.ನ ಕೃಷ್ಣ ವಿ.ಆಚಾರ್ಯ ಹಾಗೂ ಶ್ರೀನಿವಾಸ್ ಆರ್ನಮೆಂಟ್ಸ್‍ನ ಶ್ರೀಧರ್ ಆಚಾರ್ಯ ಅವರು ಭಾಗವಹಿಸಲಿದ್ದಾರೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.
