ನವದೆಹಲಿ: ಯಾವ ರೀತಿ ಹಳ್ಳಿಗಳನ್ನು ಅಭಿವೃದ್ಧಿಗೊಳಿಸಬಹುದು ಎಂಬುದರ ಬಗ್ಗೆ ಚಿಂತಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಚಾರಸಂಕಿರಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹಳ್ಳಿಗಳಿಂದ ಭಾರತ ಜೀವಿಸುತ್ತಿದೆ ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಈಗ ನಾವು ಹಳ್ಳಿಗಳನ್ನು ಯಾವ ರೀತಿ ಅಭಿವೃದ್ಧಿ ಮಾಡಬಹುದು ಎಂಬುದರ ಬಗ್ಗೆ ಚಿಂತಿಸಬೇಕಿದೆ ಎಂದು ತಿಳಿಸಿದ್ದಾರೆ.

Modi123
ಹಳ್ಳಿಗಳೆಂದರೆ ಗೌರವ ಹಾಗೂ ಅದಕ್ಕೆ ಆದಂತಹ ಸ್ಥಾನಮಾನ ನೀಡಬೇಕು. ನಮ್ಮ ಹಳ್ಳಿಗಳೆಂದರೆ ನಮಗೆ ಹೆಮ್ಮೆಯಾಗಬೇಕು ಎಂದು ಅವರು ಹೇಳಿದರು  ,  ಹಳ್ಳಿ ಜನತೆಯ ಕನಸು ದೊಡ್ಡದಾಗಿರುತ್ತದೆ. ಅಂತಹವರ ಕನಸು ನನಸು ಮಾಡುವುದು ನಮ್ಮ ಜವಾಬ್ದಾರಿಯಾಗಿರುತ್ತದೆ.
ನಾವು ನಮ್ಮ ಹಳ್ಳಿಗಳ ಅಭಿವೃದ್ಧಿಯನ್ನು ಯಾವ ರೀತಿ ಮಾಡಬೇಕು ಎಂಬುದರ  ಬಗ್ಗೆ  ಚಿಂತಿಸಿ, ಮುಂದಿನ ಐದು ವರ್ಷಗಳಲ್ಲಿ ಎಷ್ಟರ ಮಟ್ಟಿಗೆ ಹಳ್ಳಿಗಳನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಯೋಜನೆ ರೂಪಿಸಬೇಕು.
ಹಳ್ಳಿ  ಮಕ್ಕಳಿಗೆ  ಶಿಕ್ಷಣ ನೀಡಬೇಕು. ಪ್ರತಿಯೊಬ್ಬ ಹಳ್ಳಿ ನಾಗರಿಕನೂ  ವಿದ್ಯಾವಂತನಾಗಬೇಕು. ಹಳ್ಳಿಗಳ ಕಡೆ ಮಕ್ಕಳು ಶಾಲೆಗಳಿಗೆ ಹೆಚ್ಚಾಗಿ ಬರುವುದಿಲ್ಲ ಇದನ್ನು ತಡೆಯಬೇಕು. ಪ್ರತಿಯೊಂದು  ಮಗುವು ಶಿಕ್ಷಣ ಪಡೆಯಬೇಕು ಇದಕ್ಕೆ ನಾವೆಲ್ಲರೂ ದುಡಿಯಬೇಕು ಎಂದು ಮೋದಿ ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *