ನೇಪಾಳ: ನದಿಗೆ ಬಸ್ ಉರುಳಿ ಬಿದ್ದ ಪರಿಣಾಮ 12 ಭಾರತೀಯ ಪ್ರವಾಸಿಗರು ಮೃತಪಟ್ಟಿರುವ ಘಟನೆ ನೇಪಾಳದ ಧಾಡಿಂಗ್ ಬಳಿ ನಡೆದಿದೆ.
busplunge_river
ಗೋರಖ್ ಪುರದಿಂದ ಕಠ್ಮಂಡುಗೆ ಪ್ರಯಾಣಿಕರನ್ನು ತುಂಬಿಕೊಂಡು ಸಾಗುತ್ತಿದ್ದ ಬಸ್ ಹೈವೇಯಲ್ಲಿ ವೇಗವಾಗಿ ಸಾಗುತ್ತಿರುವ ವೇಳೆ ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಸಾಗುತ್ತಿದ್ದಂತೆ ಪ್ರಪಾತಕ್ಕೆ ಉರುಳಿ ನದಿಗೆ ಬಿದಿದ್ದೆ.
ನೇಪಾಳದ ರಾಜಧಾನಿ ಕಠ್ಮಂಡುವಿನಿಂದ 16 ಕಿ.ಮೀ ದೂರದಲ್ಲಿರುವ ನದಿ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದ್ದು, ಹೈವೇಯಿಂದ ಸುಮಾರು 300 ಅಡಿ ದೂರದವರೆಗೂ ಉರುಳಿಕೊಂಡು ಹೋಗಿ ನದಿಗೆ ಬಿದ್ದಿದೆ.
ಬಸ್ ನಲ್ಲಿದ್ದ 12 ಭಾರತೀಯ ಪ್ರವಾಸಿಗರು ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತದೇಹಗಳನ್ನು ಸ್ಥಳೀಯ ಮೀನುಗಾರರು ಹೊರತೆಗೆದಿದ್ದಾರೆ.

By suddi9

Leave a Reply

Your email address will not be published. Required fields are marked *