ಬಂಟ್ವಾಳ : ಎಲ್ಲಾ ವಕೀಲರುಗಳಿಗೆ ಮತ್ತು ನ್ಯಾಯಾಲಯದ ಸಿಬ್ಬಂದಿಗಳಿಗೆ ತಮ್ಮ ದೈನಂದಿನ ಕೆಲಸದ ಒತ್ತಡದಿಂದಾಗುವ ಮನಸ್ಸಿನ ಭಾರವನ್ನು ಕಳೆಯಲು ಯೋಗ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ಯು. ನುಡಿದರು. ಅವರು ವಕೀಲರ ಸಂಘ ಬಂಟ್ವಾಳ ಇದರ ವತಿಯಿಂದ ನ್ಯಾಯವಾದಿಗಳು ಹಾಗೂ ನ್ಯಾಯಾಂಗ ಸಿಬ್ಬಂದಿಗಳಿಗೆ ಯೋಗ ಸಂಜಿವಿನಿಯವರಿಂದ ಯೋಗ ಬೇಸಿಗೆ ತರಬೇತಿ ಶಿಬಿರವು ವಕೀಲರ ಸಂಘದ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು. ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ದಿನೇಶ್ ಕುಮಾರ್ ಯೋಗ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು.

ವೇದಿಕೆಯಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಮಹೇಶ್ ಆರ್. ಉಪಸ್ಥಿತರಿದ್ದರು.
ಯೋಗ ಸಂಜೀವಿನಿಯ ಸಂಜಯ್ ಸಿ.ವಿ. ಯೋಗ ಮತ್ತು ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು. ನ್ಯಾಯವಾದಿ ಆಶಾಮಣಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪುಂಚಮೆ ಚಂದ್ರಶೇಖರ ರಾವ್ ವಂದಿಸಿ ನ್ಯಾಯವಾದಿ ಕೆ.ನರೇಂದ್ರನಾಥ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
